ರಸ್ತೆ ಬದಿಗೆಸೆದ ಹಸುವಿನ ರುಂಡ

1906klb05
Published on

ಕಲಬುರಗಿ: ಬಕ್ರೀದ್ ಹಿನ್ನೆಲೆಯಲ್ಲಿ ಗೋವುಗಳ ಹತ್ಯೆ ಮಾಡಲಾಗಿದೆ ಎಂಬ ಆರೋಪದ ಮಧ್ಯೆಯೇ ಶಹಬಜಾರ್ ಮಹಾದೇವ ನಗರದ ಮಹಾದೇವ ಮಂದಿರಕ್ಕೆ ಹೋಗುವ ಎದುರಿನ ಖುಲ್ಲಾ ಜಾಗದಲ್ಲಿ ಹಸುವಿನ ಕತ್ತರಿಸಿದ ರುಂಡ ಬಿಸಾಡಿದ ಘಟನೆ ಬುಧವಾರ ನಡೆದಿದೆ.
ಈ ಕುರಿತು ಹಿಂದು ಜಾಗೃತಿ ಸಮಿತಿಯ ರಾಜು ಕಮಲಾಪುರ ಅವರು ಚೌಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಹಾದೇವ ಮಂದಿರಕ್ಕೆ ಹೋಗುವ ರಸ್ತೆಯ ಎದುರಿನ ಖುಲ್ಲಾ ಜಾಗದಲ್ಲಿ ಹಸುವಿನ ಮುಖ ಕತ್ತರಿಸಿ, ಬಿಸಾಡಿರುವುದು ಕಂಡಿದೆ. ಮುಖದ ಮೇಲಿನ ತೊಗಲು ಸಹ ಸುಲಿಯಲಾಗಿದೆ. ಆದ್ದರಿಂದ ಹಸುವಿನ ಹತ್ಯೆ ಮಾಡಿ, ಬಿಸಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ವಿಷಯ ಅರಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಗೋವಿನ ರುಂಡ ಮತ್ತಿತರ ಭಾಗವನ್ನು ಪೌರಕಾರ್ಮಿಕರ ನೆರವಿನಿಂದ ಸಾಗಿಸಿದ್ದು, ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉz್ದÉÃಶಪೂರ್ವಕ ಕೃತ್ಯ: ಹಿಂದುಗಳು ಹೆಚ್ಚಿರುವ ಮಹಾದೇವ ನಗರ ಸುತ್ತ ಎಲ್ಲೂ ಪ್ರಾಣಿಗಳ ವಧೆ ನಡೆಯುವುದಿಲ್ಲ. ಆದರೆ ಉz್ದÉÃಶಪೂರ್ವಕವಾಗಿ ಇಲ್ಲಿನ ರಸ್ತೆ ಬದಿಯಲ್ಲಿ ಗೋವಿನ ರುಂಡ ಬಿಸಾಡಲಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ರಾತ್ರಿ ವೇಳೆ ಗೋವು ಕಡಿದು ರುಂಡ ಬಿಸಾಡಿರುವ ಸಾಧ್ಯತೆ ಇದೆ. ನಿಯಮದಂತೆ ಪ್ರಾಣಿಗಳ ವಧೆ ನಂತರ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ಪಾಲಿಕೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಕೆಲದಿನ ಹಿಂದೆ ಖಾದ್ರಿ ಚೌಕ್ ಬಳಿ ಗೋ ರಕ್ಷಣೆ ಮಾಡುತ್ತಿದ್ದ ಯುವಕರ ಮೇಲೆ ಅನ್ಯಕೋಮಿನ ಗುಂಪೊAದು ಹಲ್ಲೆ ಮಾಡಿರುವುದು ಮಾಸುವ ಮುನ್ನವೇ ಅದೇ ಪ್ರದೇಶದಲ್ಲಿ ಗೋವಿನ ರುಂಡ ಬಿಸಾಡಲಾಗಿದೆ. ಇಂತಹ ಕೃತ್ಯ ಎಸಗಿದ ಕಿಡಿಗೇಡಿಗಳ ವಿರುದ್ಧ ಕ್ರಮದ ಜತೆಗೆ ಗೋ ಹತ್ಯೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net