ರಸ್ತೆ ಬದಿ ಚಿರತೆ ಕುಟುಂಬ

10 joida 01.
Published on

ಜೊಯಿಡಾ: ತಾಲೂಕಿನ ಜೊಯಿಡಾ ಗಣೇಶಗುಡಿ ಸಾಗುವ ರಸ್ತೆಯಲ್ಲಿ ನಾಲ್ಕು ಚಿರತೆಗಳು ವಾಹನ ಸವಾರರಿಗೆ ದರ್ಶನ ನೀಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಾಯಿ ಚಿರತೆಯ ಜೊತೆಗೆ ಮೂರು ಮರಿಗಳು ಕಾಳಿ ನದಿಯ ಸಮೀಪದ ಕಾಡಿನ ನಡುವಿನ ರಸ್ತೆಯ ಪಕ್ಕದಲ್ಲಿಯೇ ಆಟ ಆಡುತ್ತಿರುವ ಇರುವ ದೃಶ್ಯವನ್ನು ಕಾರಿನಲ್ಲಿ ಹೋಗುತ್ತಿದ್ದವರು ಐದು ದಿನದ ಹಿಂದೆ ಕಂಡಿದ್ದಾರೆ. ತಮ್ಮ ವಾಹನ ನಿಲ್ಲಿಸಿ ಈ ಚಿರತೆಗಳ ಓಡಾಟವನ್ನು ಚಿತ್ರೀಕರಿಸಿದ್ದಾರೆ. ಹಾಗೆಯೇ ಚಿರತೆಗಳು ಮತ್ತೆ ಕಾಡಿನತ್ತ ತೆರಳಿದ ನಂತರ ಇವರು ಮುಂದೆ ಸಾಗಿದ್ದಾರೆ. ಈ ಪ್ರದೇಶದಲ್ಲಿ ದಟ್ಟ ಅರಣ್ಯ ಹಾಗೂ ಕೆಳಗಡೆ ಸುಪಾ ಜಲಾಶಯವಿರುವ ಕಾರಣ ವನ್ಯ ಪ್ರಾಣಿಗಳು ರಸ್ತೆಯಲ್ಲಿ ಸಂಚರಿಸುವ ವೇಳೆ ಆಗಾಗ ದರ್ಶನ ನೀಡುವುದು ಸಾಮಾನ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net