ರನ್ನ ಉತ್ಸವಕ್ಕೆ ನಾಲ್ಕು ಕೋಟಿ ರೂ. ಖರ್ಚು

bkt-26-2
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಎಸಿ ಶ್ವೇತಾ ಬೀಡಿಕರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಚಿವ ಆರ್.ಬಿ.ತಿಮ್ಮಾಪುರ ಇದ್ದರು.
Published on

ಬಾಗಲಕೋಟೆ: ಮುಧೋಳ-ರನ್ನ ಬೆಳಗಲಿಯಲ್ಲಿ ಹಮ್ಮಿಕೊಂಡಿದ್ದ ರನ್ನ ಉತ್ಸವ ಕಾರ್ಯಕ್ರಮಕ್ಕೆ ೪.೬ ಕೋಟಿ ರೂ. ಸಂಗ್ರಹವಾಗಿತ್ತು, ಮೂರು ದಿನದ ಉತ್ಸವಕ್ಕೆ ೪ ಕೋಟಿ ರೂ. ಖರ್ಚಾಗಿದೆ. ೫೭,೮೦,೫೬೮ ಹಣ ಉಳಿತಾಯವಾಗಿದೆ. ಹೆಚುವರಿಯಾಗಿ ಬಾಕಿ ಪಾವತಿಸಲು ೯೭ ಲಕ್ಷ ರೂ. ಪರಿಶೀಲನೆ ಹಂತದಲ್ಲಿದೆ ಎಂದು ಜಮಖಂಡಿ ಎಸಿ, ರನ್ನ ವೈಭವದ ಸಂಚಾಲಕಿ ಶ್ವೇತಾ ಬೀಡಿಕರ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಎರಡು ಕೋಟಿ ರೂ., ಮೈಸೂರು ಸೇಲ್ಸ್ ಆ್ಯಂಡ್ ಇಂಟರ್ ನ್ಯಾಷನಲ್ ಲಿ. ೪೯ ಲಕ್ಷ ರೂ., ವಿವಿಧ ಮೂಲಕಗಳು, ದಾನಿಗಳಿಂದ ೧,೯೨,೪೦,೦೨೦ ಹಣ ಸಂಗ್ರಹವಾಗಿತ್ತು, ಪ್ರವಾಸೋದ್ಯಮ ಇಲಾಖೆಯಿಂದ ೨೦ ಲಕ್ಷ ರೂ. ಅನುದಾನ ಬಿಡುಗಡೆ ನಿರೀಕ್ಷೆಯಲ್ಲಿದ್ದೇವೆ ಎಂದರು.

ಕ್ರೀಡಾ ಇಲಾಖೆಯಿಂದ ಕ್ರೀಡೆ, ಪ್ರಶಸ್ತಿಗೆ ೧೩,೫೦,೦೦೦ ರೂ., ಸ್ಥಳೀಯ ಕಲಾವಿದರಿಗೆ ೩೪,೭೪,೦೦೦ ರೂ., ಗಣ್ಯ ವ್ಯಕ್ತಿಗಳಿಂದ ಮೊಮೆಂಟೋ ಹಾಗೂ ಇತರೆ ಖರ್ಚಿಗೆ ೨,೨೦,೦೦೦ ರೂ. ವ್ಯಯಿಸಲಾಗಿದೆ. ಶ್ಯಾಮಿಯಾನ್ ಹಾಗೂ ಆಹಾರಕ್ಕಾಗಿ ೧೫ ಲಕ್ಷ ರೂ., ಮೆರವಣಿಗಾಗಿ ೮೯,೦೦೦ ರೂ., ರನ್ನ ರತ್ನಕ್ಕಾಗಿ ೫ ಲಕ್ಷ ರೂ., ವಾಹನಗಳ ಬಳಕೆ ಮಾಡಿಕೊಳ್ಳಲು ೨,೨೮,೫೧೮ ರೂ., ಸನ್ಮಾನಕ್ಕಾಗಿ ೧,೬೦,೦೦೦ ರೂ., ದೀಪಾಲಂಕಾರಕ್ಕಾಗಿ ೨,೫೦,೦೦೦ ರೂ., -Àಲಪುಷ್ಪ ಪ್ರದರ್ಶನಕ್ಕಾಗಿ ೩,೯೨,೦೦೦, ಕಾರ್ಯಕ್ರಮಕ್ಕೆ ವೇದಿಕೆ, ಸಂಗೀತಗಾರರ, ಚಿತ್ರ ನಟ, ನಟಿಯರನ್ನು ಕರೆತರಲು ಹೊಯ್ಸಳ ಕ್ರಿಯೇಷನ್ಸಗೆ ೨ ಕೋಟಿ ೮೫ ಲಕ್ಷ ರೂ. ಸೇರಿದಂತೆ ವಿವಿಧ ಕಾರ್ಯಗಳಿಗೆ ಒಟ್ಟಾರೆ ೪,೦೩,೫೯,೪೫೨ ಹಣ ವ್ಯಯಿಸಲಾಗಿದೆ ಎಂದು ವಿವರಿಸಿದರು.

ಕಳೆದ ಒಂದು ತಿಂಗಳ ಹಿಂದೆ ಮುಧೋಳ, ಬೆಳಗಲಿ ವೇದಿಕೆಗೆ ಹೆಚ್ಚುವರಿಯಾಗಿ ಸೌಲಭ್ಯ ಒದಗಿಸಲಾಗಿದ್ದು, ಬೆಳಗಲಿ ವೇದಿಕೆಗೆ ೩೮,೩೫,೦೦೦, ಮುಧೋಳ ವೇದಿಕೆಗೆ ೫೯,೧೭,೭೦೦ ಪಾವತಿಸುವಂತೆ ಹೊಯ್ಸಳ ಕ್ರಿಯೇಷನ್ಸ ಕೋರಿದ್ದಾರೆ. ಈ ಮೊತ್ತವನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net