ರಥೋತ್ಸವ ಆಚರಣೆ ಸರಳ

15sirsi3
Published on

ಶಿರಸಿ: ತಾಲೂಕಿನ ಸ್ವರ್ಣವಲ್ಲೀಯಲ್ಲಿ ಮೇ 5ರಿಂದ ನಡೆಯಬೇಕಿದ್ದ ಶ್ರೀಲಕ್ಷ್ಮೀ ನರಸಿಂಹ ರಥೋತ್ಸವ ಹಾಗೂ ರಾಜ್ಯ ಮಟ್ಟದ ಕೃಷಿ ಜಯಂತಿಯನ್ನು ಕೈಬಿಡಲಾಗಿದ್ದು, ಭಕ್ತರು ಅಂದು ತಮ್ಮ ಮನೆಯ ದೇವರಿಗೆ ಪೂಜೆ ಸಲ್ಲಿಸಿ ಪಾನಕ ನೈವೇದ್ಯ ನೀಡುವಂತೆ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದ್ದಾರೆ.

ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್​ಡೌನ್ ಮೇ 3 ರ ತನಕ ವಿಸ್ತರಣೆ ಯಾದ ಕಾರಣ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರಿಗೆ ಧ್ವನಿ ಸಂದೇಶವನ್ನು ನೀಡಿರುವ ಶ್ರೀಗಳು, ದೊಡ್ಡ ಪ್ರಮಾಣದಲ್ಲಿ ಉತ್ಸವ ನಡೆಸುವುದನ್ನು ಕೈ ಬಿಡಲಾಗಿದ್ದು, ದೇವರ ಪೂಜೆ ಹವನ, ಅಭಿಷೇಕಗಳು ಮಠದ ಒಳಗಡೆ ನಡೆಯಲಿದೆ. ದೇವರ ಅನುಗ್ರಹದಿಂದ ಸಮಾಜಕ್ಕೆ ಅಂಟಿರುವ ಕರೊನಾ ಪಿಡುಗು ಬೇಗ ನಿವಾರಣೆ ಆಗಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಎಲ್ಲ ಶಿಷ್ಯರು ಮೇ 6 ರಂದು ಲಕ್ಷ್ಮೀ ನರಸಿಂಹ ಜಯಂತಿಯ ಉತ್ಸವದಂದು ಸಂಜೆ 6 ಗಂಟೆಗೆ ದೇವರಿಗೆ ದೀಪ ಹಚ್ಚಿ, ಪಾನಕದ ಸೇವೆಯನ್ನು ಮಾಡಬೇಕು. ಜೊತೆಗೆ ಮಠದ ಸ್ಮರಣೆ ಮಾಡಿ ಮನೆಯಲ್ಲಿಯೇ ಉತ್ಸವ ಆಚರಣೆ ಮಾಡಬೇಕು ಎಂದಿರುವ ಶ್ರೀಗಳು, ಜಾಗತಿಕ ಸಮಸ್ಯೆ ನಿವಾರಣೆ ಆಗಲು ದೇವರಿಗೆ ಜಪ, ಪೂಜೆ, ಪ್ರಾರ್ಥನೆಯನ್ನು ಮಾಡಬೇಕು ಎಂದು ತಿಳಿಸಿದ್ದಾರೆ. ಬೆಳಗಿನ ವೇಳೆ ಆಸನ, ಪ್ರಾಣಾಯಾಮ ಮಾಡಬೇಕು. ಇವುಗಳಿಂದ ಶಾರೀರಿಕ ಹಾಗೂ ಮಾನಸಿಕವಾಗಿ ರೋಗ ನಿರೋಧಕ ಶಕ್ತಿಗಳು ಬೆಳೆಯುತ್ತದೆ. ಅದರ ಜೊತೆಗೆ ದೇವರ ಪೂಜೆ ಮಾಡಿದಲ್ಲಿ ಭಗವಂತನ ಅನುಗ್ರಹನದಿಂದ ಎಲ್ಲವೂ ಸರಿ ಹೋಗುತ್ತದೆ ಎಂದು ಸಂದೇಶವನ್ನು ನೀಡಿದ್ದಾರೆ.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net