ರಟಕಲ್ ಜಿಪಂ ಕ್ಷೇತ್ರ ಬದಲಾವಣೆ ಬೇಡ

election
Published on

ಕಲಬುರಗಿ: ಜಿಪಂ ಕ್ಷೇತ್ರವೆಂದು ಘೋಷಿಸಿದ್ದ ಕಾಳಗಿ ತಾಲೂಕಿನ ರಟಕಲ್‌ನ್ನು ಏಕಾಏಕಿಯಾಗಿ ತೆಗೆದು ಹಾಕಿ, ಕೋಡ್ಲಿ ಜಿಪಂ ಕ್ಷೇತ್ರಕ್ಕೆ ಸೇರ್ಪಡೆ ಮಾಡಿರುವುದು ಸರಿಯಲ್ಲ. ಕೂಡಲೇ ಈ ನಿರ್ಧಾರ ಬದಲಿಸಬೇಕು ಎಂದು ರಟಕಲ್ ಗ್ರಾಪಂ ಅಧ್ಯಕ್ಷ ಜಗದೀಪ ಬಿ.ಮಾಳಗೆ, ಬಿಜೆಪಿ ಮಂಡಲ ಉಪಾಧ್ಯಕ್ಷ ರಾಜಶೇಖರ ಗುಡದಾ ಆಗ್ರಹಿಸಿದರು.

ರಾಜಕೀಯ ಒತ್ತಡದಿಂದ ರಟಕಲ್ ಗ್ರಾಮವನ್ನು ಜಿಪಂ ಕ್ಷೇತ್ರದಿಂದ ತೆಗೆದು ಹಾಕಿ, ಕೋಡ್ಲಿ ಜಿಲ್ಲಾ ಪಂಚಾಯಿತಿಗೆ ಸೇರ್ಪಡೆ ಮಾಡಿದ್ದು, ಸರಿಯಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ರಟಕಲ್‌ದಿಂದ ಕೋಡ್ಲಿ ಗ್ರಾಮ ೧೪ ಕಿ.ಮೀ. ದೂರದಲ್ಲಿದೆ. ಪ್ರಾದೇಶಿಕವಾಗಿ ಮಧ್ಯ ಸ್ಥಾನದಲ್ಲಿರುವ ರಟಕಲ್ ಗ್ರಾಮವೂ ಜನರಿಗೆ ಅನುಕೂಲಕರವಾಗಿದೆ. ಅಲ್ಲದೆ ಜಿಪಂ ಕ್ಷೇತ್ರ ಘೋಷಣೆಗೆ ಬೇಕಾದ ಜನಸಂಖ್ಯೆ, ಭೂವಿಸ್ತೀರ್ಣ, ಸರ್ಕಾರಿ ಆಸ್ಪತ್ರೆ ಹಾಗೂ ವಿದ್ಯುತ್‌ಶಕ್ತಿ ವಿಭಾಗ, ಪೊಲೀಸ್ ಠಾಣೆ ಹೊಂದಿದೆ. ೨೦ ಸದಸ್ಯರನ್ನು ಹೊಂದಿದ ದೊಡ್ಡ ಗ್ರಾಮ ಪಂಚಾಯಿತಿಯಾಗಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆ, ಗ್ರಂಥಾಲಯ ಸೇರಿ ಎಲ್ಲ ಸೌಲಭ್ಯ ಹೊಂದಿರುವ ಗ್ರಾಮವನ್ನು ಹಿಂದಿನ ಸರ್ಕಾರದಲ್ಲಿ ಜಿಪಂ ಕ್ಷೇತ್ರವಾಗಿ ಘೋಷಿಸಲಾಗಿತ್ತು. ರಾಜಕೀಯ ದುರುದ್ದೇಶದಿಂದ ಆಕ್ಷೇಪಣೆ ನೀಡದೆ, ಅಧಿಸೂಚನೆ ಹೊರಡಿಸದೆ ರಟಕಲ್ ಜಿಪಂ ಕ್ಷೇತ್ರ ತೆಗೆದು ಹಾಕಲಾಗಿದೆ. ಕೂಡಲೇ ನೂತನ ನಿರ್ಧಾರ ಕೈಬಿಡಬೇಕು. ಇಲ್ಲದಿದ್ದರೆ ಕಾಳಗಿ ಚಲೋ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹಿಂದೂ ಜಾಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ, ಕಾಳಗಿ ತಾಲೂಕು ಅಧ್ಯಕ್ಷ ಶಂಕರ ಚೌಕಾ, ಶರಣು ಭೈರಪ್ಪ, ಸಿದ್ದಣ್ಣ ಭೈರಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net