ರಂಜಿಸಿದ ಕವ್ವಾಲಿ, ಧಾರ್ಮಿಕ ಗೀತೆಗಳ ನೃತ್ಯ

05.Pyp. 02.
Published on

ಪಿರಿಯಾಪಟ್ಟಣ: ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ಭಾನುವಾರ ಮುಸ್ಲಿಮರು ಈದ್ ಮಿಲಾದ್ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಸಡಗರ ಸಂಭ್ರಮದಿಂದ ಭಾಗವಹಿಸಿದ್ದರು.

ಗ್ರಾಮದಲ್ಲಿ ಹಸಿರು ಬಾವುಟಗಳೊಂದಿಗೆ ಯುವಕರು ಮತ್ತು ಮಕ್ಕಳು ಉತ್ಸಾಹದಿಂದ ಮೆರವಣಿಗೆಯಲ್ಲಿ ಭಾಗವಹಿಸಿ ವಿಶೇಷ ಪ್ರಾರ್ಥನೆ ನಡೆಯುವ ಸ್ಥಳಕ್ಕೆ ಆಗಮಿಸಿದರು. ಸಮಾರಂಭದಲ್ಲಿ ವಿದ್ಯಾರ್ಥಿಗಳು ಮತ್ತು ಮಕ್ಕಳಿಂದ ಕವ್ವಾಲಿ, ಧಾರ್ಮಿಕ ಗೀತೆಗಳನ್ನೊಳಗೊಂಡ ನೃತ್ಯ ನಡೆಸಿಕೊಟ್ಟರು.

ಗ್ರಾಮದ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಸಮಾರಂಭ ನಡೆದ ಸ್ಥಳವನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಸಮಾರಂಭಕ್ಕೆ ಆಗಮಿಸಿದ್ದ ಎಲ್ಲರಿಗೂ ವಿಶೇಷ ಔತಣ ಕೂಟ ಏರ್ಪಡಿಸಲಾಗಿತ್ತು.

ಈದ್ ಮಿಲಾದ್ ಅಂಗವಾಗಿ ಮುಸ್ಲಿಂ ಧಾರ್ಮಿಕ ಗುರುಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಸಮಾರಂಭದಲ್ಲಿ ಮಿಲಾದ್ ಸಮಿತಿ ಸದಸ್ಯರಾದ ಸೈಯದ್ ಸಿರಾಜ್, ಸೈಯದ್ ಅಜ್ಜು, ಬಾಸಿದ್ ಶರೀಫ್, ಅಯಾಜ್ ಅಹ್ಮದ್, ಮೊಯಿನ್ ಅಹಮದ್, ಶಫೀಕ್‌ಖಾನ್, ಸೈಯದ್ ಶಿರೂರು, ಮಕ್ಬೂಲ್ ಷರೀಫ್, ನಜೀರ್ ಅಹಮದ್ ಬಾಜಿ, ಸೈಯದ್ ಮುನಾವರ್, ಸೈಯದ್ ಶಾಫಿ, ಸೈಯದ್ ಜಾವೀದ್ ಸೇರಿದಂತೆ ಗ್ರಾಮದ ಯುವಕರು, ಹಿರಿಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net