ರಂಗೋಲಿ ಬಿಡಿಸಿ ಸಂಸ್ಥಾಪನಾ ದಿನ ಆಚರಣೆ

bkt-6-4
ಬಾಗಲಕೋಟೆ ನಗರದಲ್ಲಿ ಕಮಲದ ಚಿತ್ರದ ರಂಗೋಲಿ ಬಿಡಿಸಿ ಗಮನ ಸೆಳೆದ ಮಹಿಳೆಯರು.
Published on

ಬಾಗಲಕೋಟೆ: ಬಿಜೆಪಿ ಸಂಸ್ಥಾಪನಾ ದಿನದ ಅಂಗವಾಗಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರಾದ್ಯಂತ ಎಲ್ಲ ಕಾರ್ಯಕರ್ತರು, ಕಾರ್ಯಕರ್ತೆಯರು ಅತ್ಯಂತ ಉತ್ಸಾಹದಿಂದ ಒಗ್ಗಟ್ಟಿನಿಂದ ಪ್ರತಿಯೊಂದು ಬೂತ್ ನಲ್ಲಿ ದಿನಾಚರಣೆಯನ್ನು ವಿಭಿನ್ನವಾಗಿ ಪರಸ್ಪರ ವಿಜಯ ಕಂಕಣವನ್ನು ಕಟ್ಟಿಕೊಂಡು ಪಕ್ಷದ ಅಽಕೃತ ಅಭ್ಯರ್ಥಿಯನ್ನು ಗೆಲ್ಲಿಸಲು ಪಟತೊಟ್ಟು ಕಂಕಣವನ್ನು ಕಟ್ಟಿಕೊಂಡರು.
ಅಲ್ಲದೆ ಮಹಿಳೆಯ ತಮ್ಮ ತಮ್ಮ ಮನೆಯ ಮುಂದೆ ಅಭಿಮಾನಕ್ಕಾಗಿ ಕಮಲದ ಚಿತ್ರದ ರಂಗೋಲಿಯನ್ನು ಬಿಡಿಸಿ ಹಷÀðವ್ಯಕ್ತಪಡಿಸಿದರಲ್ಲದೆ ಸಿಹಿ ಹಂಚಿ ಖುಷಿಪಟ್ಟರು, ಒಟ್ಟಾರೆ ಬಾಗಲಕೋಟೆ ನಗರ ಕಮಲದ ಚಿತ್ರದಿಂದ ಸಿಂಗಾರಗೊಂಡಿದ್ದು ಪ್ರತಿಯೊಬ್ಬರ ಕಣ್ಮನ ಸೆಳೆಯಿತು. ಮತಕ್ಷೇತ್ರದ ತುಂಬೆಲ್ಲಾ ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಹಬ್ಬವನ್ನಾಗಿ ಆಚರಿಸಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net