ರಂಗನಾಥಸ್ವಾಮಿ ರಥೋತ್ಸವ ಸಡಗರ

Oplus_16908288
Oplus_16908288
Published on

ಆಲೂರು: ತಾಲೂಕಿನ ಕುಂದೂರು ಹೋಬಳಿ ಕದಾಳು ಗ್ರಾಪಂ ವ್ಯಾಪ್ತಿಯ ಬೆಟ್ಟದಹಳ್ಳಿ ಗ್ರಾಮದಲ್ಲಿ ಗುಹೆದ್ ಗುಡ್ಡ ಶ್ರೀ ರಂಗನಾಥಸ್ವಾಮಿ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ದೇವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಬಳಿಕ ರಥದ ಚಕ್ರಗಳಿಗೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಲಾಯಿತು. ನಂತರ ಭಕ್ತರು ಜಯಘೋಷಗಳನ್ನು ಕೂಗುತ್ತಾ ತೇರನ್ನು ಎಳೆದರು. ರಥೋತ್ಸವದಲ್ಲಿ ಕದಾಳು, ಕಿರಗಡಲು, ದೇವರಮನೆ ಕೊಪ್ಪಲು, ಚನ್ನಾಪುರ, ರಾಯಸಮುದ್ರ, ಮುತ್ತಿಗೆ, ಪಟ್ನ, ಟಿ.ತಿಮ್ಮನಹಳ್ಳಿ, ತುರುಗನಹಳ್ಳಿ, ಕಡಬಗಾಲ ಗ್ರಾಮಗಳಿಂದ ಜನರು ಆಗಮಿಸಿದ್ದರು. ಈ ವೇಳೆ ಭಕ್ತರು ರಥದ ಮೇಲೆ ಬಾಳೆಹಣ್ಣು, ಮಂಡಕ್ಕಿ, ಮೆಣಸಿನ ಕಾಳುಗಳನ್ನು ಎಸೆದು ಭಕ್ತಿ ಸಮರ್ಪಿಸಿದರು.

ಶಾಸಕ ಸಿಮೆಂಟ್ ಮಂಜು, ಸಂಸದ ಶ್ರೇಯಸ್ ಪಟೇಲ್, ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net