ರಾಮನಗರ ಆರ್ ಟಿಓ ಕಚೇರಿ ಮೇಲೆ ಲೋಕಾ ದಾಳಿ

28-06-rama-lokayuta 1
Published on

ರಾಮನಗರ: ನಕಲಿ ದಾಖಲೆಗಳನ್ನು ಸೃಷ್ಠಿಸಿ ಹಳೇ ಟ್ರಾೃಕ್ಟರ್‌ಗಳಿಗೆ ಹೊಸ ನೋಂದಣಿ ಸಂಖ್ಯೆ ನೀಡಿ ಸರ್ಕಾರಕ್ಕೆ ಕೋಟ್ಯಂತರ ರೂ ವಂಚಿಸಿದ್ದ ಜಾಲವನ್ನು ಬೇಧಿಸಿರುವ ಲೋಕಾಯುಕ್ತರ ಪೊಲೀಸರು ರಾಮನಗರ ಪ್ರಾದೇಶಿಕ ಸಾರಿಗೆ ಅಧಿಕಾರಿ ಸೇರಿದಂತೆ ಮೂವರನ್ನು ಬಂಧಿಸಿದೆ.

ಲೋಕಾಯುಕ್ತ ಎಸ್‌ಪಿ ವಂಶಿಕೃಷ್ಣ ನೇತೃತ್ವದ ತಂಡ, ರಾಮನಗರ ಪ್ರಾದೇಶಿಕ ಸಾರಿಗೆ ಕಚೇರಿ, ಆರ್‌ಟಿಓ ಅಧಿಕಾರಿ ಹಾಗೂ ಸಿಬ್ಬಂದಿ ಬೆಂಗಳೂರಿನ ಮನೆ ಸೇರಿದಂತೆ ಒಟ್ಟು ಐದು ಕಡೆಗಳಲ್ಲಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿರುವ ಜೊತೆಗೆ ವಯೋನಿವೃತ್ತಿಗೆ ಒಂದು ದಿನ ಬಾಕಿ ಇದ್ದ ಆರ್‌ಟಿಓ ಶಿವಕುಮಾರ್, ಪ್ರಥಮ ದರ್ಜೆ ಸಹಾಯಕ ರಚಿತ್ ರಾಜ್ ಮತ್ತು ಬ್ರೋಕರ್ ಸತೀಶ್ ಎಂಬುವರನ್ನು ಬಂಧಿಸಿದೆ.

ಈ ಮೂಲಕ ರಾಮನಗರ ಆರ್‌ಟಿಓದಲ್ಲಿ ನಡೆದಿದೆ ಎನ್ನಲಾದ ಸುಮಾರು 10 ಕೋಟಿ ರೂಗೂ ಹೆಚ್ಚು ಅಕ್ರಮವನ್ನು ಬಯಲಿಗೆ ಎಳೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net