ಯೋಜನೆಗಳ ಮಾಹಿತಿ ಸಂಗ್ರಹ ನಿಖರವಾಗಿರಲಿ

17 HANUR 1
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಹನೂರು: ಗಣತಿಯ ವೇಳೆ ಎಲ್ಲ ವಿಧದ ನೀರಾವರಿ ಯೋಜನೆಗಳ ಬಗ್ಗೆ ಮೊಬೈಲ್ ತಂತ್ರಾಂಶದಲ್ಲಿ ಸಂಗ್ರಹಿಸುವ ಮಾಹಿತಿ ನಿಖರವಾಗಿರಬೇಕು ಹಾಗೂ ಯೋಜನೆ ಬಿಟ್ಟು ಹೋಗದಂತೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಅಭಿಲಾಷ್ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದ ಸಭಾಂಗಣದಲ್ಲಿ ಗುರುವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ 7ನೇ ಸಣ್ಣ ನೀರಾವರಿ ಹಾಗೂ 2ನೇ ನೀರಿನ ಆಸರೆಗಳ ಗಣತಿ ಹಿನ್ನೆಲೆಯಲ್ಲಿ ಗಣತಿದಾರರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆಯು ರಾಜ್ಯ ಸರ್ಕಾರದ ಸಹಯೋಗದೊಂದಿಗೆೆ ಶೇ.100 ಆರ್‌ಎಂಐಎಸ್ ಯೋಜನೆಯಡಿ ಪ್ರತಿ 5 ವರ್ಷಕ್ಕೊಮ್ಮೆ ಸಣ್ಣ ನೀರಾವರಿ ಗಣತಿಯನ್ನು ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಸಣ್ಣ ನೀರಾವರಿ ಹಾಗೂ ನೀರಿನ ಆಸರೆಯ ಯೋಜನೆಗಳನ್ನು ಒಳಗೊಂಡಿದೆ. ಸಣ್ಣ ನೀರಾವರಿ ಗಣತಿಯಲ್ಲಿ ಅಂತರ್ಜಲ ಹಾಗೂ ಮೇಲ್ಮೈ ಯೋಜನೆಯನ್ನು ಹೊಂದಿದ್ದು, 2 ಸಾವಿರ ಹೆಕ್ಟೇರ್‌ವರೆಗೆ ಅಚ್ಚುಕಟ್ಟು ಪ್ರದೇಶ ಎಂದು ಪರಿಗಣಿಸಲಾಗಿದೆ. ಇನ್ನು ನೀರಿನ ಆಸರೆಯಲ್ಲಿ ಕಾಲುವೆ, ಕುಂಟೆ ಯೋಜನೆಯ ಪ್ರದೇಶವಾಗಿದೆ. ಆದ್ದರಿಂದ ಈ 2 ಯೋಜನೆಗಳ ಬಗ್ಗೆ 2018-19ನೇ ಸಾಲಿನಿಂದ 2023-24ರವರೆಗೂ ಸಮಗ್ರವಾಗಿ ಮಾಹಿತಿಯನ್ನು ಸಂಗ್ರಹಿಸಬೇಕಿದೆ ಎಂದು ಹೇಳಿದರು.

ಈ ಹಿಂದೆ ಆಫ್‌ಲೈನ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿತ್ತು. ಈ ಬಾರಿ ವಸ್ತುನಿಷ್ಠ ಹಾಗೂ ನಿಖರ ಮಾಹಿತಿಯನ್ನು ಹೊಂದುವ ಸಲುವಾಗಿ ಮೊಬೈಲ್ ತಂತ್ರಾಂಶದ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ತರಬೇತಿಯ ಪ್ರಯೋಜನವನ್ನು ಸದುಪಯೋಗಪಡಿಸಿಕೊಂಡು ನಿಗದಿಪಡಿಸಿರುವ ಗ್ರಾಮಗಳಿಗೆ ತೆರಳಿ ಫೋಟೋದೊಂದಿಗೆ ಮಾಹಿತಿ ಸಂಗ್ರಹಿಸಬೇಕು. ಇದರಿಂದ ನೀರಾವರಿಯ ವಾಸ್ತವ ಸ್ಥಿತಿಯನ್ನು ತಿಳಿಯಬಹುದಾಗಿದೆ. ಹಾಗೆಯೇ ಸಂಗ್ರಹವಾದ ಮಾಹಿತಿಯನ್ನು ಜಲ ಸಂಪನ್ಮೂಲ ಇಲಾಖೆಯು ವಿವಿಧ ಆಯಾಮಗಳಲ್ಲಿ ಬಳಕೆ ಮಾಡುವುದರ ಮೂಲಕ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಹಾಯಕವಾಗುತ್ತದೆ. ಇದರಿಂದ ಜನರಿಗೆ ನೀರಾವರಿ ಸೌಕರ್ಯ ದೊರಕಲಿದೆ ಎಂದು ತಿಳಿಸಿದರು.

ಬಳಿಕ ಗಣತಿದಾರರಿಗೆ ಮೊಬೈಲ್ ತಂತ್ರಾಂಶದ ಮೂಲಕ ಸಂಗ್ರಹಿಸಬೇಕಾದ ಮಾಹಿತಿ, ಗಣತಿ ವಿಧಾನ, ಭೌಗೋಳಿಕ ಕ್ಷೇತ್ರ, ಕೃಷಿ ಯೋಗ್ಯ ಕ್ಷೇತ್ರ, ಗ್ರಾಮದಲ್ಲಿರುವ ನೀರಾವರಿ ಕ್ಷೇತ್ರ ಹಾಗೂ ಗಣತಿಗೆ ಸಂಬಂಧಿಸಿದಂತೆ ಇನ್ನಿತರ ವಿಷಯಗಳ ಬಗ್ಗೆ ತರಬೇತಿ ನೀಡಲಾಯಿತು.

ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ಆರ್‌ಐಗಳಾದ ಮಹದೇವಸ್ವಾಮಿ, ಶಿವಕುಮಾರ್, ಶೇಷಣ್ಣ, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಸಣ್ಣ ನೀರಾವರಿ ಇಲಾಖೆಯ ಎಇ ಪ್ರತಾಪ್, ಸಾಂಖ್ಯಿಕ ಸಹಾಯಕ ಅಧಿಕಾರಿ ಯೋಗೇಶ್, ಗ್ರಾಮ ಆಡಳಿತ ಅಧಿಕಾರಿಗಳಾದ ವಿನೋದ್, ಕಾರ್ತಿಕ್, ಮಾರುತಿ, ನಾಗ ನಂದಿನಿ, ಶ್ರುತಿ, ವಿದ್ಯಾ, ಹೇಮಾ, ಆಸ್ಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net