ಯೋಗಭ್ಯಾಸದಿಂದ ಸಾಧನೆಗೆ ದಾರಿ

ಯೋಗ ದಿನದ ಅಂಗವಾಗಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಮಕ್ಕಳು ಯೋಗಾಭ್ಯಾಸ ಮಾಡಿದರು.
Published on

ಅರಸೀಕೆರೆ ಗ್ರಾಮಾಂತರ: ಪ್ರತಿನಿತ್ಯ ಯೋಗಾಸನ ಮಾಡುವುದರಿಂದ ಏಕಾಗ್ರತೆ ಹೆಚ್ಚಿಸಿಕೊಂಡು ಸಾಧನೆ ಮಾಡಲು ದಾರಿಯಾಗುತ್ತದೆ ಎಂದು ಪ್ರಾಂಶುಪಾಲ ಜಯಕುಮಾರ್ ಅಭಿಪ್ರಾಯಪಟ್ಟರು.

ತಾಲೂಕಿನ ಬಾಣಾವರ ಹೋಬಳಿಯ ಹೊರಹೊಲಯಲ್ಲಿರುವ ಚಿಕ್ಕಾರೆಹಳ್ಳಿ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಯೋಗ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗಿ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.

ದೈಹಿಕ ಶಿಕ್ಷಣ ಶಿಕ್ಷಕ ಅರುಣೋದಯ ಮಾತನಾಡಿ, ಯೋಗಾಸನ ಮಾಡುವುದರಿಂದ ವಿದ್ಯಾಭ್ಯಾಸದೊಂದಿಗೆ ದೇಹ ಸದೃಢವಾಗಿ ಕ್ರೀಡೆಗಳಲ್ಲಿ ಭಾಗವಹಿಸಲು ಹೆಚ್ಚಿನ ಅನುಕೂಲವಾಗುತ್ತದೆ. ಅದರಲ್ಲೂ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಯೋಗಾಭ್ಯಾಸ ಮಾಡುವುದರಿಂದ ಬಹಳಷ್ಟು ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲೆ ರೂಪಾ, ಶಿಕ್ಷಕ ವೃಂದದ ಚಂದ್ರಶೇಖರ್ ಎಫ್‌ಡಿಎ ಬಶೀರ್ ಇಸ್ಮಾಯಿಲ್, ದಿನೇಶ್, ಮಂಜುನಾಥ್, ಮಮತಾ, ಕುಮಾರಿ, ದಿವ್ಯಾ, ಶುಶ್ರುಷಕಿ ಶೋಭಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net