

ಕಲಬುರಗಿ: ನಿತ್ಯ ಯೋಗಾಭ್ಯಾಸ ಮಾಡುವುದರಿಂದ ಸದೃಢ ಆರೋಗ್ಯ ಸಂಪಾದನೆ ಸಾಧ್ಯ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಯೋಗ ತರಬೇತುದಾರ ಡಾ.ಚಂದ್ರಕಾAತ ಬಿರಾದಾರ್ ಹೇಳಿದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟಿçÃಯ ಯೋಗ ದಿನ ಕಾರ್ಯಕ್ರಮ ಉದ್ಘಾಟಿಸಿದ ಅವರು, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಯೋಗ ಒಂದುಗೂಡಿಸುತ್ತದೆ. ಇದು ನಮ್ಮ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆೆ. ಯೋಗ ಮನಸ್ಸು ಮತ್ತು ದೇಹ, ಆಲೋಚನೆ ಮತ್ತು ಕ್ರಿಯೆಯ ಏಕತೆ ಒಳಗೊಂಡಿರುತ್ತದೆ. ಒತ್ತಡ, ಆತಂಕ ಮತ್ತು ಖಿನ್ನತೆ ಕಡಿಮೆ ಮಾಡಲು ನೆರವಾಗುತ್ತದೆ ಎಂದರು.
ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಆಧುನಿಕ ಜೀವನಶೈಲಿಯಿಂದ ಹಲವು ರೋಗಕ್ಕೆ ತುತ್ತಾಗುತ್ತಿz್ದÉÃವೆ. ಇದರಿಂದ ಹೊರಬರಲು ಯೋಗವೊಂದೇ ಮಾರ್ಗ ಎಂದು ಹೇಳಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ನಿತ್ಯ ನಿಯಮಿತ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ನೀವು ಆರೋಗ್ಯವಾಗಿರುವುದರ ಜತೆಗೆ ಸಮಾಜವನ್ನು ಆರೋಗ್ಯವಾಗಿಡಲು ಸಹ ಸಹಕರಿಸಿದಂತಾಗುತ್ತದೆ ಎಂದರು.
ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿ ಕಲ್ಪನಾ ಮಹೇಂದ್ರಕರ್ ಮತ್ತು ದಿಶಾ ಮೆಹತಾ ಇದ್ದರು. ಕ್ರೀಡಾ ವಿಭಾಗದ ಪ್ರಾಧ್ಯಾಪಕ ಡಾ.ಮಿಲಿಂದ ಸುಳ್ಳದ ಸ್ವಾಗತಿಸಿದರು. ಜವೇರಿಯಾ ಅಂಜುಮ್ ನಿರೂಪಣೆ ಮಾಡಿ ವಂದಿಸಿದರು. ಪೂಜಾ ಪ್ರಾರ್ಥಿಸಿದರು.