ಯೋಗಥಾನಲ್ಲಿ ಸಾಮೂಹಿಕ ಯೋಗ

bkt-24-1
ಸಾಮೂಹಿಕ ಯೋಗ
Published on

ಬಾಗಲಕೋಟೆ: ಯೋಗಥಾನ್-22 ಅಂಗವಾಗಿ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಒತ್ತಡ ನಿರ್ವಹಣೆಗೆ ಯೋಗ ಕುರಿತು ಭಾನುವಾರ ನಡೆದ ಸಾಮೂಹಿಕ ಯೋಗಾಭ್ಯಾಸ ಆಕರ್ಷಿಸಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಹಾಗೂ ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗಥಾನ್-22ರ ಸಾಮೂಹಿಕ ಯೋಗಾಭ್ಯಾಸಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯ ವೃದ್ಧಿಗೆ ಯೋಗ ಅವಶ್ಯವಾಗಿದೆ. ಯೋಗ, ಪ್ರಾಣಾಯಾಮ ಹಾಗೂ ಜ್ಞಾನ ಮಾಡುವದರಿಂದ ನಮ್ಮ ಮನಸ್ಸನ್ನು ತದೇಖಚಿತ್ತಗೊಳಿಸಿ ಆಲ್ಹಾದಕರವನ್ನಾಗಿ ಮಾಡುತ್ತದೆ ಎಂದರು.
ಕಂದಾಯ, ಜಿಲ್ಲಾ ಪಂಚಾಯಿತಿ, ಪೊಲೀಸ್ ಹಾಗೂ ಹೋಮಗಾಡ್ಸ್ ಇಲಾಖೆಯ ಅಕಾರಿ ಹಾಗೂ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸೇರಿ 500 ಕ್ಕೂ ಹೆಚ್ಚು ಜನ ಒತ್ತಡದ ನಿರ್ವಹಣೆಗೆ ಯೋಗ ವಿಷಯದ ಕುರಿತು ಸಾಮೂಹಿಕ ಯೋಗಾಬ್ಯಾಸ ಮಾಡಿ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ತಹಸೀಲ್ದಾರ ವಿನಯಕುಮಾರ ಪಾಟೀಲ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಜಿ.ಗೂಡನವರ, ಜಿಲ್ಲಾ ಆಯುಷ ಅಧಿಕಾರಿ ಅಕ್ಕಮಹಾದೇವಿ ಗಾಣಿಗೇರ, ನೆಹರು ಯುವ ಕೇಂದ್ರದ ಅಧಿಕಾರಿ ಸುಷ್ಮಾ ಗವಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net