ಯುವಕರಲ್ಲಿ ದೇಶಸೇವಾ ಗುಣಗಳು ಮೈಗೂಡಲಿ : ಕ್ಯಾ.ಭೋಗಶೆಟ್ಟಿ

Published on

ಕಾರ್ಗಿಲ್ ವಿಜಯ ದಿವಸದ ೨೪ನೇ ವರ್ಷಾಚರಣೆ : ಕಾರ್ಗಿಲ್ ಯೋಧರಿಗೆ ಗೌರವ ಸತ್ಕಾರ

ಕಲಬುರಗಿ: ಇಂದಿನ ಯುವಕರು ಪದವಿ ಪಡೆದರೆ ಸಾಲದು. ಜೊತೆಗೆ ಕೌಶಲ್ಯಗಳು, ಸೃಜನಶೀಲತೆ, ದೇಶಸೇವಾ ಗುಣಗಳು ವಿದ್ಯಾರ್ಥಿ ದೆಸೆಯಿಂದಲೇ ಮೈಗೂಡಿಸಿಕೊಳ್ಳಬೇಕು. ಜನ್ಮಭೂಮಿಯ ಋಣ ತೀರಿಸುವ ಕಾರ್ಯ ಮಾಡಬೇಕು. ಸೈನ್ಯದಲ್ಲಿ ಸೇರಿ ದೇಶ ರಕ್ಷಣೆಯ ಕಾರ್ಯ ಮಾಡಲು ಯುವಕರು ಮುಂದೆ ಬರಬೇಕು ಎಂದು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಮಾಜಿ ಯೋಧ ಕ್ಯಾ.ಶರಣಪ್ಪ ಭೋಗಶೆಟ್ಟಿ ಯುವಕರಿಗೆ ಕರೆ ನೀಡಿದರು.
        ನಗರದ ಗೋವಾ ಹೊಟೇಲ್ ಎದುರುಗಡೆಯಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಏರ್ಪಡಿಸಲಾಗಿದ್ದ ‘ಕಾರ್ಗಿಲ್ ವಿಜಯ ದಿವಸದ ೨೪ನೇ ವರ್ಷಾಚರಣೆ’ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಯೋಧರಿಗೆ ಗೌರವ ಸತ್ಕಾರ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
        ಹಿಮಾವೃತ ಪ್ರದೇಶ, ವಿಪರಿತ ಚಳಿ, ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿಯೂ ಜೀವದ ಹಂಗನ್ನು ತೊರೆದು, ತಮ್ಮ ಕುಟುಂಬದ ಬಗ್ಗೆ ಚಿಂತಿಸದೆ, ಹಗಲು-ರಾತ್ರಿಯೆನ್ನದೇ ದೇಶದ ರಕ್ಷಣೆಗೆ ಸದಾ ಕಂಕಣಬದ್ಧವಾಗಿ ಅಮೂಲ್ಯವಾದ ಸೇವೆಯನ್ನು ಸಲ್ಲಿಸುವ ಸೈನಿಕರಿಗೆ ತಮ್ಮ ಕುಟುಂಬಕ್ಕಿAತ ದೇಶದ ಹಿತರಕ್ಷಣೆಯೆ ಮುಖ್ಯವಾಗಿರುತ್ತದೆ. ಅವರ ರಕ್ತ ಪ್ರತಿ ಕಣದಲ್ಲಿ ದೇಶಪ್ರೇಮ ತುಂಬಿರುತ್ತದೆ. ದೇಶದ ಎಲ್ಲರಲ್ಲಿಯೂ ಇಂತಹ ದೇಶಪ್ರೇಮ ಅಳವಡಿಕೆಯಾಗಬೇಕು ಎಂದರು.
        ಸತ್ಕಾರ ಸ್ವೀಕರಿಸಿ ಮಾತನಾಡಿದ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಮಾಜಿ ಯೋಧ ಶಿವಶರಣಪ್ಪ ಎಸ್.ತಾವರಖೇಡ್, ನೂರಾರು ಯೋದರು ತಮ್ಮ ಜೀವವನ್ನು ನೀಡಿ ದೇಶವನ್ನು ಕಾಪಾಡಿ ಕಾರ್ಗಿಲ್ ಯುದ್ಧದಲ್ಲಿ ವಿಜಯವನ್ನು ಸಾಧಿಸಿದ್ದಾರೆ. ಇದು ವಿರೋಧಿ ದೇಶಗಳಿಗೆ ಒಂದು ಸಂದೇಶವಾಗಿದೆ. ಭಾರತೀಯರ ಸೈನಿಕರು ಮೂಲತಃ ಅಹಿಂಸಾವಾದಿಗಳು. ದೇಶದ ಹಿತಕ್ಕೆ ದಕ್ಕೆ ಬಂದಾಗ ತಮ್ಮ ಜೀವದ ಬಗ್ಗೆ ಎಂದಿಗೂ ಕೂಡಾ ಚಿಂತಿಸುವುದಿಲ್ಲ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೈನ್ಯಕ್ಕೆ ಸೇರ್ಪಡೆಯಾಗಿ ತಾಯಿ ಭಾರತಾಂಬೆಯ ಸೇವೆ ಮಾಡಬೇಕು. ಸೈನಿಕರಿಗೆ ಸಾವಿಲ್ಲ, ಅವರ ಸೇವೆ ಅಜರಾಮರಮ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಸಂಸ್ಥೆಯ ಮುಖ್ಯಸ್ಥ ಅಸ್ಲಾಂ ಶೇಖ್, ಪ್ರಮುಖರಾದ ಡಾ.ಸುನೀಲಕುಮಾರ ಎಚ್.ವಂಟಿ, ಶಿವಯೋಗಪ್ಪ ಬಿರಾದಾರ, ನೀಲಕಂಠಯ್ಯ ಹಿರೇಮಠ, ಸಾಯಿಪ್ರಸಾದ ಎಸ್.ವಂಟಿ, ತ್ರಿವೇಣಿ ರಾಜೋಲಕರ್, ನಿಲೋಫರ್ ಶೇಖ್, ಶೀತಲ್, ನಿರುಪಮಾ, ರವಿ ಪಾಟೀಲ್, ರಾಹುಲ್, ಅರುಣಕುಮಾರ, ಅಂಬರೀಶ್, ಶರಣು, ಅಭಿಶೇಕ್ ಸೇರಿದಂತೆ ಇನ್ನಿತರರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net