ಯುಗಾದಿ ಹಬ್ಬ ಭಾರತೀಯ ಸಂಸ್ಕೃತಿಯ ಸಂಕೇತ

bkt-2-4
ಬಾಗಲಕೋಟೆ ನಗರದ ಬಿವಿವಿ ಸಂಘದ ಇನ್‌ಸ್ಟೂçಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಮ್ಸ್) ಮಹಾವಿದ್ಯಾಲಯದಲ್ಲಿ ಬುಧವಾರ ಭಾರತೀಯ ಶಿಕ್ಷಣ ಮಂಡಲ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಯುಗಾದಿ ಹಬ್ಬ ಆಚರಣಾ ಕಾರ್ಯಕ್ರಮ ಬಿವಿವಿ ಸಂಘದ ಸಲಹೆಗಾರತಿ, ವಿಶ್ರಾಂತ ಕುಲಪತಿ ಡಾ.ಮೀನಾ ಆರ್.ಚಂದಾವರಕರ ಉದ್ಘಾಟಿಸಿದರು.
Published on

ಬಾಗಲಕೋಟೆ: ಯುಗಾದಿ ಹಬ್ಬವು ಹೊಸ ವರ್ಷದ ಆದಿಯನ್ನು ಸೂಚಿಸುವ ಅತ್ಯಂತ ಮಹತ್ವಪೂರ್ಣ ಹಬ್ಬವಾಗಿದ್ದು, ಈ ಹಬ್ಬವನ್ನು ಭಾರತದಲ್ಲಿ ಅತ್ಯಂತ ಸಂಭ್ರಮದಿ0ದ ಆಚರಿಸಲಾಗುತ್ತದೆ ಎಂದು ಬಿವಿವಿ ಸಂಘದ ಸಲಹೆಗಾರತಿ, ವಿಶ್ರಾಂತ ಕುಲಪತಿ ಡಾ.ಮೀನಾ ಆರ್.ಚಂದಾವರಕರ ಹೇಳಿದರು.

ನಗರದ ಬಿವಿವಿ ಸಂಘದ ಇನ್‌ಸ್ಟೂçಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಮ್ಸ್) ಮಹಾವಿದ್ಯಾಲಯದಲ್ಲಿ ಬುಧವಾರ ಭಾರತೀಯ ಶಿಕ್ಷಣ ಮಂಡಲ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಯುಗಾದಿ ಹಬ್ಬ ಆಚರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಬ್ಬವು ಕೇವಲ ಸಂಭ್ರಮಾಚರಣೆಯ ಸಂಕೀತವಲ್ಲದೇ, ಮಾನವೀಯ ಮೌಲ್ಯಗಳನ್ನು ರೂಪಿಸುವ ಒಂದು ವಿಶೇಷ ಹಬ್ಬವಾಗಿದ್ದು, ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂದರು.

ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯದ ಡಾ.ಎಂ.ಪಿ ಚಂದ್ರಿಕಾ ಕುರಂದವಾಡ ಮಾತನಾಡಿ, ಯುಗಾದಿ ಹಬ್ಬಕ್ಕೆ ವಿವಿಧ ರೀತಿಯಲ್ಲಿ ಮಹತ್ವ ಇದೆ. ವಿದ್ಯಾರ್ಥಿಗಳು ಅದನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಭಾರತೀಯ ಶಿಕ್ಷಣ ಮಂಡಲ ಬಾಗಲಕೋಟೆ ಅಧ್ಯಕ್ಷ ಎಸ್.ಆರ್.ಮನಹಳ್ಳಿ, ಮಹಾವಿದ್ಯಾಲಯದ ನಿರ್ದೇಶಕ ಡಾ.ಪ್ರಕಾಶ ಕೆ. ವಡವಡಗಿ ಉಪಸ್ಥಿತರಿದ್ದರು. ಗಂಗೂಬಾಯಿ ನಿರೂಪಿಸಿದರು. ವಾಸವಿ ಪ್ರಾರ್ಥಿಸಿದರು, ಪ್ರಯಾಂಕ ಮಾಗಿ ಹಾಗೂ ಶರಥ್ ಪರಿಚಯಿಸಿದರು. ಕುಮಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net