ಯಾವುದೇ ರಾಜೀಗೆ ಒಪ್ಪಲ್ಲ

bkt-11-9
ಮುಧೋಳ ನಗರದ ಪಾರ್ಕ ಹೊಟೇಲ್‌ನಲ್ಲಿ ಬೆಂಬಲಿಗರೊಂದಿಗೆ ಸಭೆ ನಡೆಸಿದ ಬಳಿಕ ಸತೀಶ ಬಂಡ್ಡಿವಡ್ಡರ ಮಾತನಾಡಿದರು.
Published on

ಬಾಗಲಕೋಟೆ: ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಬಂಡಾಯ ಪುಟಿದೇಳ ತೊಡಗಿದ್ದು, ಬಾಗಲಕೋಟೆ ಬಳಿಕ ಮುಧೋಳದಲ್ಲಿಯೂ ಅಸಮಧಾನ ಸ್ಪೋಟಗೊಂಡಿದೆ. ಟಿಕೆಟ್ ದೊರೆಯುವ ವಿಶ್ವಾಸದಲ್ಲಿದ್ದ ಸತೀಶ ಬಂಡ್ಡಿವಡ್ಡರ ಚುನಾವಣೆ ಅಖಾಡದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಘೋಷಣೆ ಮಾಡಿದ್ದು, ಯಾವುದೇ ರಾಜೀಗೆ ಒಪ್ಪುವದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯ ಮುಧೋಳ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ೨೦೧೮ ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧೆ ಮಾಡಿದ್ದರು. ಈ ಸಾರಿ ಟಿಕೆಟ್ ದೊರೆಯುವ ವಿಶ್ವಾಸದಲ್ಲಿದ್ದರು. ಆದರೇ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಬೆಂಬಲಿಗರು, ಅಭಿಮಾನಿಗಳು, ಮುಖಂಡರ ಜೊತೆ ಮಂಗಳವಾರ ಸಭೆ ನಡೆಸಿ ಸ್ಪರ್ಧೆ ಬಗ್ಗೆ ಖಚಿತ ಪಡಿಸಿದರು.
ಮುಧೋಳ ನಗರದ ಪಾರ್ಕ ಹೊಟೇಲ್‌ನಲ್ಲಿ ಬೆಂಬಲಿಗರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸತೀಶ ಬಂಡ್ಡಿವಡ್ಡರ, ಅಭಿಮಾನಿಗಳು, ಬೆಂಬಲಿಗರ ಒತ್ತಾಯದ ಮೇರೆಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ೩೫ ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದೇನೆ ನನಗೆ ಚುನಾವಣೆ ತಯಾರಿ ಮಾಡಿಕೊಳ್ಳಲು ಹೇಳಿದ್ದರು. ಕಳೆದ ೫ ವರ್ಷದಿಂದ ಕ್ಷೇತ್ರದಲ್ಲಿ ನಿರಂತರ ಸಂಪರ್ಕದಲ್ಲಿದ್ದೆ. ಎಲ್ಲರು ಸಹಕಾರ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ನನಗೆ ಗೆಲ್ಲುವ ಅವಕಾಶ ಸ್ಪಷ್ಟವಾಗಿದ್ದರೂ ಜಾತಿಯ ನೆಪ ಹೇಳಿ ಟಿಕೆಟ್ ನೀಡಿಲ್ಲ. ನಿಮ್ಮನ್ನು ಎಂಎಲï ಸಿ ಅಥವಾ ನಿಗಮ ಮಂಡಳಿ ಅಧ್ಯಕ್ಷ ಮಾಡುವುದಾಗಿ ಹೇಳಿದರು. ೪೫ ವರ್ಷದಿಂದ ಈ ಕ್ಷೇತ್ರ ಎಸ್ಸಿ ಕ್ಷೇತ್ರವಾಗಿದೆ. ಎಸ್ಸಿ ಹೊರತಾದ ಎಲ್ಲ ಜÁತಿಗಳಿಗೆ ಅವಕಾಶ ಇಲ್ಲ. ಎಂಎಲ್‌ಸಿ ಅಥವಾ ನಿಗಮ ಮಂಡಳಿ ಅಧ್ಯಕ್ಷ ಆ ವರ್ಗಗಳಿಗೆ ನೀಡಬೇಕು ಅದನ್ನು ಕಸಿದುಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.
ನಾನು ಚುವಣೆಗೆ ನಿಲ್ಲಬೇಕು ಬಯಸಿಲ್ಲ. ನಿಷ್ಠಾವಂತ ಕಾರ್ಯಕರ್ತರ ಆಗ್ರಹಕ್ಕೆ ಶರಣಾಗಿ ಚುನಾವಣೆಗೆ ಸ್ಪಽðಸುವೆ. ಕಾರ್ಯಕರ್ತರು, ಬೆಂಬಲಿಗರು, ಹಿತೈಸಿಗಳೆ ನನ್ನ ಸರ್ವಸ್ವ ಅವರೇ ನನ್ನ ಹೈಕಮಾಂಡ ಎಂದು ಹೇಳಿದರು.

ಮುಖಂಡರಾದ ಮಲ್ಲಿಕಾರ್ಜುನ ಕಾಬಿ, ಮಂಜುನಾಥ ಅರಳಿಕಟ್ಟಿ ಮುಂತಾದವರು ಮಾತನಾಡಿದರು.

ನೋಟು ವೋಟು ಕೊಡ್ತೀವಿ: ಸಭೆಯಲ್ಲಿ ಸತೀಶ ಬಂಡ್ಡಿವಡ್ಡರ ಅವರಿಗೆ ಭಾರಿ ಬೆಂಬಲ ವ್ಯಕ್ತವಾಯಿತು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಣಮಂತ ಅಡವಿ ಮಾತನಾಡಿ, ಮೂರು ದಶಕದಿಂದ ಪಕ್ಷ ಸಂಘಟಿಸಿದ್ದಿರಿ ನಿಮ್ಮ ಗೆಲವು ಕಾರ್ಯಕರ್ತರ ಗೆಲವು ನೀವು ಪಕ್ಷೇತರಾಗಿ ನಿಲ್ಲಬೇಕು. ಕ್ಷೇತ್ರದ ಜನತೆ ನಿಮಗೆ ಓಟು, ಒಂದು ನೋಟು, ಒಂದು ರೊಟ್ಟಿ ನೀಡಿ ಆಯ್ಕೆ ಮಾಡುತ್ತಾರೆ ಎಂದರು. ಇದಕ್ಕೆ ಬೆಂಬಲಿಸಿದ ಅನೇಕ ಜನ ಬೆಂಬಲಿಗರು ನಾವು ಹಣ ಹಾಕಿ ಚುನಾವಣೆ ಮಾಡುತ್ತೇವೆ. ನೀವು ಪ್ರಚಾರ ಮಾಡಿ ಬಂದು ಹೋಗಿ ಅಂತ ಹೇಳಿ ಹಣ ನೀಡುವ ವಾಗ್ದಾಣ ಮಾಡಿದರು. ಕೆಲವೇ ನಿಮೀಷದಲ್ಲಿ ೨೫ ಲಕ್ಷ ರೂ. ಹೆಚ್ಚು ಹಣ ಸಂಗ್ರಹವಾಗಿದ್ದು ಅಚ್ಚರಿಗೆ ಕಾರಣವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net