ಯಾಲಕ್ಕಿ ನಾಡಲ್ಲಿ ಮಹಾಮಾರಿ ಆರ್ಭಟ

carona logo
Published on

ಹಾವೇರಿ: ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಳವಾಗುತ್ತಿದೆ. ಶುಕ್ರವಾರ ಒಬ್ಬ ಆಶಾ ಕಾರ್ಯಕರ್ತೆ, ಹಾನಗಲ್ಲ ತಾಲೂಕು ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಸೇರಿ 45 ಜನರಲ್ಲಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 275ಕ್ಕೇರಿದೆ. ಶಿಗ್ಗಾಂವಿಯ ವೃದ್ಧನೊಬ್ಬ ಸೋಂಕಿನಿಂದ ಮೃತಪಟ್ಟಿದ್ದಾನೆ. ರಾಣೆಬೆನ್ನೂರ ತಾಲೂಕು ಕೋಣನತಂಬಿಗಿಯಲ್ಲಿ ಕರೊನಾ ಶಂಕಿತ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಶುಕ್ರವಾರ ಹಾವೇರಿ ತಾಲೂಕಿನಲ್ಲಿ 21, ಶಿಗ್ಗಾಂವಿ 9, ರಾಣೆಬೆನ್ನೂರ ತಾಲೂಕು 6, ಸವಣೂರ 5, ಹಾನಗಲ್ಲ ತಾಲೂಕಿನಲ್ಲಿ 4ಪಾಸಿಟಿವ್ ಬಂದಿವೆ. ಈವರೆಗೆ 116 ಜನ ಗುಣವಾಗಿದ್ದು, 156 ಪ್ರಕರಣಗಳು ಸಕ್ರಿಯವಾಗಿವೆ.

ಶಿಗ್ಗಾಂವಿ ಪಟ್ಟಣದ ಜಯನಗರ ಕಂಟೇನ್ಮೆಂಟ್ ಜೋನ್​ನಲ್ಲಿದ್ದ 82ವರ್ಷದ ವೃದ್ಧ ಜು. 6ರಂದು ಮೃತಪಟ್ಟಿದ್ದ. ಆತನ ಸ್ವ್ಯಾಬ್ ಟೆಸ್ಟ್​ಗೆ ಕಳಿಸಿ ಕೋವಿಡ್ ಮಾರ್ಗಸೂಚಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಜು. 10ರಂದು ಪಾಸಿಟಿವ್ ವರದಿ ಬಂದಿದೆ. ರಾಣೆಬೆನ್ನೂರ ತಾಲೂಕು ಕೋಣನಂಬಿಗಿಯ 50ವರ್ಷದ ಮಹಿಳೆ ಜ್ವರದ ಕಾರಣ ಜು. 8ರಂದು ರಾಣೆಬೆನ್ನೂರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಳು. ಶುಕ್ರವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಮೃತಳ ಸ್ವ್ಯಾಬ್ ಸಂಗ್ರಹಿಸಿ ಟೆಸ್ಟ್​ಗೆ ಕಳಿಸಲಾಗಿದೆ.

ಕನವಳ್ಳಿ ಕರೊನಾ ಹಾಟ್​ಸ್ಪಾಟ್

ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮವೊಂದರಲ್ಲಿಯೇ ಶುಕ್ರವಾರ 28, 67, 50, 30, 29, 65, 48ವರ್ಷದ ಮಹಿಳೆ, 60, 60, 35, 50, 20, 26ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ. ಹಾವೇರಿ ನಗರದ ಗುತ್ತಲ ರಸ್ತೆಯ 30ವರ್ಷದ ಮಹಿಳೆ, ಅಶ್ವಿನಿನಗರದ 38ವರ್ಷದ ಮಹಿಳೆ, ಶಿವಬಸವೇಶ್ವರ ನಗರ 3ನೇ ಕ್ರಾಸ್​ನ 44ವರ್ಷದ ಪುರುಷ, ಅಶ್ವಿನಿನಗರದ ಸೂರ್ಯನಾರಾಯಣ ಆಸ್ಪತ್ರೆ ಬಳಿಯ 28ವರ್ಷದ ಪುರುಷ, 65ವರ್ಷದ ಪುರುಷ, 22ವರ್ಷದ ಪುರುಷ, 55ವರ್ಷದ ಮಹಿಳೆ, ಕಲ್ಲುಮಂಟಪ ಓಣಿಯ 26ವರ್ಷದ ಮಹಿಳೆ ಸೇರಿ ಒಟ್ಟು ಹಾವೇರಿ ನಗರದ 8ಜನರಿಗೆ ಸೋಂಕು ಖಚಿತವಾಗಿದೆ.

ಶಿಗ್ಗಾಂವಿ ತಾಲೂಕು ಬಂಕಾಪುರ ಚೌದಕಟ್ಟಿಯ 36ವರ್ಷದ ಪುರುಷ ಹಾಗೂ 3ನೇ ವಾರ್ಡ್​ನ 28ವರ್ಷದ ಮಹಿಳೆ, ಶಿಗ್ಗಾಂವಿ ಜಯನಗರದ 82ವರ್ಷದ ವೃದ್ಧ(ಮೃತ), 45, 29, 23 ವರ್ಷದ ಪುರುಷರು, ವಿನಾಯಕ ನಗರದ 59ವರ್ಷದ ಪುರುಷ, ಅಂಬೇಡ್ಕರ್ ನಗರದ 58ವರ್ಷದ ಮಹಿಳೆ, ತಾಲೂಕಿನ ಸದಾಶಿವಪೇಟೆಯ 26ವರ್ಷದ ಪುರುಷನಿಗೆ ಸೋಂಕು ಖಚಿತಗೊಂಡಿದೆ.

ಸವಣೂರ ತಾಲೂಕು ಮಾದಾಪುರ ಗ್ರಾಮದ 47, 27 ವರ್ಷದ ಮಹಿಳೆಯರು, ಮನ್ನಂಗಿಯ 24ವರ್ಷದ ಪುರುಷ, 15ವರ್ಷದ ಬಾಲಕ, 45 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ರಾಣೆಬೆನ್ನೂರ ತಾಲೂಕು ನಿಟ್ಟೂರಿನ 25ವರ್ಷದ ಪುರುಷ, ದೇವಗೊಂಡನಕಟ್ಟಿಯ 33ವರ್ಷದ ಆಶಾ ಕಾರ್ಯಕರ್ತೆ, ರಾಣೆಬೆನ್ನೂರ ಮಾರುತಿನಗರದ 28ವರ್ಷದ ಮಹಿಳೆ, 30ವರ್ಷದ ಪುರುಷ, ದೊಡ್ಡಪೇಟೆಯ 42ವರ್ಷದ ಪುರುಷ, 58ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ಹಾನಗಲ್ಲ ತಾಲೂಕು ಆಡೂರನ 69ವರ್ಷದ ಮಹಿಳೆ, ಹಾನಗಲ್ಲ ತಾಲೂಕು ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ನವನಗರದ 32ವರ್ಷದ ಪುರುಷ ಹಾಗೂ 43ವರ್ಷದ ಪುರುಷ, 56ವರ್ಷದ ಪುರುಷನಿಗೆ ಸೋಂಕು ಖಚಿತವಾಗಿದೆ.

ಅರ್ಧ ಶತಕ ದಾಟಿದ ಹಾವೇರಿ ತಾಲೂಕು…

ಈವರೆಗೆ ಶಿಗ್ಗಾಂವಿ ತಾಲೂಕಿನಲ್ಲಿ ಮಾತ್ರ ತೀವ್ರಗತಿಯಲ್ಲಿ ಏರಿಕೆ ಕಂಡಿದ್ದ ಕರೊನಾ ಸೋಂಕಿತರ ಸಂಖ್ಯೆ ಇದೀಗ ಹಾವೇರಿಯಲ್ಲಿ ವೇಗ ಪಡೆದುಕೊಂಡಿದೆ. ಶುಕ್ರವಾರ ಒಂದೇ ದಿನ 21ಜನರಿಗೆ ಪಾಸಿಟಿವ್ ಬರುವ ಮೂಲಕ ಹಾವೇರಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 51ಕ್ಕೇರಿದೆ. ಶಿಗ್ಗಾಂವಿ 83, ಹಿರೇಕೆರೂರ 42, ಹಾನಗಲ್ಲ 39, ರಾಣೆಬೆನ್ನೂರ 30, ಸವಣೂರ 28, ಬ್ಯಾಡಗಿಯಲ್ಲಿ 2ಪ್ರಕರಣಗಳು ದೃಢಪಟ್ಟಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net