

ಬಾಗಲಕೋಟೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿ ಉದ್ಯಮಕ್ಕೆ ಪ್ಯಾಶನ್ ಮತ್ತು ನೇಟವರ್ಕ್ ಸಂಪರ್ಕದ ಅಗತ್ಯವಾಗಿದ್ದು, ಕೌಶಲ ಮತ್ತು ಜ್ಞಾನದಿಂದ ಹೊಸ ಉದ್ಯಮ ಪ್ರಾರಂಭಿಸಬಹುದಾಗಿದೆ ಎಂದು ಬೆಂಗಳೂರಿನ ಎಪ್‌ಕೆಸಿಸಿಐ ನ ಹಿರಿಯ ಉಪಾಧ್ಯಕ್ಷ, ಉದ್ಯಮಿ ಉಮಾ ರೆಡ್ಡಿ ಹೇಳಿದರು.
ನಗರದ ಬಿವಿವಿ ಸಂಘದ ಇನ್ಸಿಟಿಟ್ಯೂಟ್ ಆ-ï ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಮ್ಸ್) ನ ೨೫ನೇ ವರ್ಷದ ರಜತ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಎಂಬಿಎ ಪದವಿ ಮಹಾವಿದ್ಯಾಲಯ ನಾಯಕತ್ವ ಮತ್ತು ವ್ಯವಸ್ಥಾಪಕ ಕೌಶಲಗಳ ಮೇಲೆ ಕೇಂದ್ರಿಕರಿಸುವ ಒಂದು ಪದವಿಮಟ್ಟದ ವ್ಯಾಪಾರ ಮತ್ತು ನಿರ್ವಹಣಾ ಪದವಿಯಾಗಿದೆ. ಈ ಪದವಿ ಗಳಿಸುವ ಮೂಲಕ ನಿಮ್ಮ ವೃತ್ತಿ ವೇಗಗೊಳಿಸಿಲು ಹೊಸ ಕೈಗಾರಿಕೆಗಳಿಗೆ ಪರಿವರ್ತನೆ ಮಾಡಲು. ಸ್ವಂತ ವ್ಯವಹಾರ ಪಾರಂಭಿಸಲು ಕೌಶಲ ಮತ್ತು ಜ್ಞಾನದಿಂದ ನಿಮ್ಮನ್ನು ನೀವು ಸಜ್ಜುಗೊಳಿಸಿರಿ, ಇಂದಿನ ವಿದ್ಯಾರ್ಥಿಗಳು ಯಶಸ್ವಿ ಉದ್ಯಮಿಯಾಗಲು ಶಿಸ್ತು, ಪರಿಶ್ರಮ. ಪಾಲುದಾರಿಕೆ, ಸಂಘಟನಾತ್ಮಕ ಟಿಂ ವರ್ಕ, ಗುಣಮಟ್ಟ, ಪ್ಯಾಶನ್. ನೇಟವರ್ಕ ಮತ್ತು ಕಮ್ಯುನಿಕೇಷನ್ ಮುಖ್ಯವಾಗಿರುತ್ತದೆ. ಸ್ವ ಇಚ್ಚಾಶಕ್ತಿಯಿಂದ ಸ್ವಂತ ಕನಸಿನೊಂದಿಗೆ ಹೊಸ ಉದ್ಯಮ ಸ್ಥಾಪನೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಬಾಗಲಕೋಟೆ ಮೂಲಭೂತ ಸೌಕರ್ಯ ಹಾಗೂ ಶಿಕ್ಷಣದ ಸೌಲಭ್ಯ ಮತ್ತು ಉತ್ತಮ ಹಸಿರು ವಾತಾವರಣ ಮೂಲಕ ಅಭಿವೃದ್ಧಿ ಹೊಂದಿದ ಮಾದರಿ ನಗರವಾಗಿದೆ. ಬಾಗಲಕೊಟೆ ನಗರ ಅಭಿವೃದ್ಧಿಗೆ ಬಿವಿವಿ ಸಂಘದ ಕೊಡುಗೆ ದೊಡ್ಡದು, ಇಲ್ಲಿನ ಶಿಸ್ತು, ಸ್ವಚ್ಚತೆ, ಸೌಂದರ್ಯಕರಣವಾಗಿದೆ. ಬಾಗಲಕೋಟೆ ನಗರ ಬಹಳಷ್ಟು ಮುಂದುವರೆದಿದೆ. ಎಲ್ಲ ರೀತಿಯ ಶಿಕ್ಷಣಕ್ಕೆ ಅವಕಾಶವಿರುವ ಈ ಸಂಸ್ಥೆಯ ಸದುಪಯೋಗ ಇಲ್ಲಿನ ವಿದ್ಯಾರ್ಥಿಗಳು ಪಡೆದುಕೋಳ್ಳಬೇಕು. ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಬಿಮ್ಸ್ ಶತಮಾನೋತ್ಸವ ಆಚರಿಸಿಕೊಳ್ಳಲಿ ಎಂದು ಹಾರೈಸಿದರು.
ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಕಾಲೇಜು ಕಳೆದ ೨೫ ವರ್ಷದಲ್ಲಿ ಸಾಕಷ್ಟು ಪ್ರಗತಿ ಸಾಽಸಿದೆ. ಸಹಸ್ರಾರು ವಿದ್ಯಾರ್ಥಿಗಳು ಎಂ.ಬಿ.ಎ ಸ್ನಾತಕೋತ್ತರ ಪದವಿ ಪಡೆದು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ವಿವಿಧ ಕಂಪನಿಗಳಲ್ಲಿ, ಸರ್ಕಾರಿ, ಬ್ಯಾಂಕ್, ಸಹಕಾರ, ಖಾಸಗಿ ಮತ್ತು ಸ್ವಂತ ವ್ಯಾಪಾರ ಉದ್ದಿಮೆಗಳಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಬಿಮ್ಸ್ ಹಾಗೂ ಸಂಘದ ಹೆಮ್ಮೆಯಾಗಿದೆ ಎಂದರು.
ಭಾರತದ ಪ್ರಗತಿಯ ಓಟದಲ್ಲಿ ನಾವು ಶ್ರಮವಹಿಸಿಬೇಕಾಗಿದೆ. ಮುಂಬರುವ ಯುವಶಕ್ತಿಗೆ ಉದ್ಯೋಗಾವಕಾಶ ಸಿಗುವಂತೆ ಮಾಡಲು ಮೂಲ ಸೌಕರ್ಯ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಭಾರತದ ಸಂಸ್ಕೃತಿ ಎಲ್ಲರೊಡನೆ ಒಂದಾಗುವ ಶಕ್ತಿ ಇರುವುದರಿಂದ ಇಂದು ಜಗತ್ತಿನ ಬೇರೆ ದೇಶಗಳಲ್ಲಿ ಒಳ್ಳೆಯೆ ವೈದ್ಯರು, ಇಂಜಿನಿರ‍್ಸ್, ಉದ್ಯಮಿಗಳೆಲ್ಲಾ ಮೂಲ ಭಾರತದವರೆ ಇದ್ದಾರೆ. ಬೇರೆ ದೇಶಗಳಿಗಿಂತ ಭಾರತ ಯುವಕರಿಗೆ ಅತಿ ದೊಡ್ಡ ಶಕ್ತಿ ಇದೆ. ಇಂದಿನ ಯುವಶಕ್ತಿಗೆ ಜಾಗತಿಕವಾಗಿ ಸ್ಪರ್ಧೆ ಮಾಡುವಂತೆ ನಮ್ಮಲ್ಲಿ ಶಿಕ್ಷಣದ ಪಾಠಮಾಡುವ ವಿಧಾನ ಬದಲಾಗಬೇಕಿದೆ.ನಮ್ಮ ಮೂಲ ಕಸಬುಗಳನ್ನು ಉತ್ತೇಜನಗೊಳಿಸುವ ಮೂಲಕ ಸ್ವಂತ ಉದ್ಯಮಿಗಳಾಗಲಿ ಎಂದರು.
ಕಾರ್ಯಕ್ರಮದಲ್ಲಿ ೨೫ ನೇ ವರ್ಷದ ಸ್ಮರಣೆಗಾಗಿ ಬಿಮ್ಸ್ ಆರೋಹಣ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ನಂತರ ಬಿಮ್ಸ್ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ವಿಶ್ರಾಂತ ನಿರ್ದೇಶಕರಿಗೆ ಹಾಗೂ ವಿಶ್ವವಿದ್ಯಾಲಯಕ್ಕೆ ರ‍್ಯಾಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆ ಮೇಲೆ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜುಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಬಾವಿ ಉಪಸ್ಥಿತರಿದ್ದರು. ಬಿಮ್ಸ್ ಸಂಸ್ಥೆಯ ನಿರ್ದೇಶಕ ಡಾ.ಪ್ರಕಾಶ ವಡವಡಗಿ ಸ್ವಾಗತಿಸಿದರು. ಡಾ.ಅಮರೇಶ ಚರಂತಿಮಠ ವರದಿ ವಾಚನ ಮಾಡಿದರು. ತೇಜಸ್ವಿನಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೊ. ಸಂತೋಷಕುಮಾರ ಪರಿಚಯಿಸಿದರು. ಡಾ.ಪವನ ಬೆನಕಟ್ಟಿ ವಂದಿಸಿದರು. ಶ್ರದ್ಧಾ ಸರದೇಸಾಯಿ ಮತ್ತು ವೈಭವಿ ಹರ್ಲಾಪುರ ನಿರೂಪಿಸಿದರು.