ಯವ್ವನವೆ ಸಾಧನೆಯ ಹಾದಿ

bkt-16-15
ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ದ್ವೀತಿಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಡಾ. ವಿವೇಕಾನಂದ ದೇವರನ್ನು ಸನ್ಮಾನಿಸಲಾಯಿತು
Published on

ಬಾಗಲಕೋಟೆ: ಹದಿಹರೆಯದಲ್ಲಿ ಸಾಽಸುವ ಹಠದೊಂದಿಗೆ ಹೆಜ್ಜೆ ಹಾಕಬೇಕು. ಸಾಧಕರಾಗಲು ನಿರಂತರ ಅಭ್ಯಾಸ ಅವಶ್ಯಕ. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ನಿಮ್ಮ ಬದುಕನ್ನು ರೂಪಿಸಬಲ್ಲವು ಎಂದು ಗುಣದಾಳದ ಕಲ್ಯಾಣ ಹೀರೆಮಠದ ಡಾ.ವಿವೇಕಾನಂದ ದೇವರು ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ದ್ವೀತಿಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮದು ಸನಾತನ ಪರಂಪರೆ ಎಂದುಕೊಳ್ಳುವುದೆ ಹೆಮ್ಮೆ. ಜೀವನದಲ್ಲಿ ಏನಾದರೂ ಸಾಽಸುವ ಹಠ, ಚಲ ಬರುವುದೇ ಹದಿಹರೆಯದ ವಯಸ್ಸಿನಲ್ಲಿ. ಇಲ್ಲಿ ಹಚ್ಚಿದ ದೀಪ ನಮ್ಮ ಬದುಕಿನ ಉದ್ದಕ್ಕೂ ಕರೆದುಕೊಂಡು ಹೋಗುತ್ತದೆ. ಪದವಿ ಯಾವುದೆ ಇರಲಿ ಕಲಿಕೆಯಲ್ಲಿ ನಿಷ್ಠೆ, ಪ್ರಾಮಾಣಿಕತೆ ಅವಶ್ಯ. ಜಾತಿಯತೆ, ರಾಜಕೀಯ, ಸಮುದಾಯ ಗಲಬೆಗಳನ್ನು ಮೆಟ್ಟಿ ಏಕತೆ ಸಾರುವ ಶಕ್ತಿ ನಿಮ್ಮಲ್ಲಿದೆ. ಅದನ್ನು ಅರಿತುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರಾಚಾರ್ಯ ಡಾ.ವಿ.ಎಸ್.ಕಟಗಿಹಳ್ಳಿಮಠ ಮಾತನಾಡಿ, ಜೀವನದಲ್ಲಿ ಉನ್ನತ ಸ್ಥಾನಕ್ಕೆ ಹೋಗುವುದಷ್ಟ್ಟು ಮುಖ್ಯವಲ್ಲ. ಹಸಿದವರಿಗೆ ಒಂದು ಹೊತ್ತು ಊಟ ಕೊಡುವುದೆ ನಿಜವಾದ ಸಾಧನೆ. ಭಾರತದಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು. ಶಿಕ್ಷಣದ ಜೊತೆಗೆ ಸಂಸ್ಕಾರ ಮುಖ್ಯ ಅದನ್ನು ಬೆಳಸಿಕೊಳ್ಳಿ. ಮೌಲ್ಯಯುತ ಕಾರ್ಯಕ್ರಮಗಳಿಗೆ ತಪ್ಪದೆ ಹಾಜರಾಗಿ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಎಂ.ಎಂ.ದೇವನಾಳ, ಆರ್.ಎಂ.ಬೆಣ್ಣೂರ, ವಿದ್ಯಾರ್ಥಿ ಪ್ರತಿನಿಧಿಗಳಾದ ವಿಜಯ ತಳವಾರ, ಪವಿತ್ರಾ ಯಲಿಗಾರ ಸೇರಿದಂತೆ ಕಾಲೇಜು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net