ಯಳಂದೂರಿನಲ್ಲಿ ಮುಂದುವರಿದ ಮಳೆ

21 yelandur 03
ಯಳಂದೂರು ಪಟ್ಟಣದಲ್ಲಿ ಬುಧವಾರ ಸಂಜೆ ಮಳೆ ಸುರಿಯಿತು.
Published on

ಯಳಂದೂರು: ತಾಲೂಕಿನಾದ್ಯಂತ ಬುಧವಾರ ಸಂಜೆಯೂ ಮಳೆ ಸುರಿಯಿತು. ಮಂಗಳವಾರ ಸಂಜೆ ಜೋರಾಗಿ ಸುರಿದಿದ್ದ ಮಳೆ ಎರಡನೇ ದಿನವೂ ಮುಂದುವರಿಯಿತು.

ತಾಲೂಕಿನ ಬಿಳಿಗಿರಿಂಗನಬೆಟ್ಟದ ಕೆ.ಗುಡಿ ಮಾರ್ಗವಾಗಿ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೀರು ತುಂಬಿ ಹರಿಯಿತು. ಪಟ್ಟಣದಲ್ಲೂ ರಸ್ತೆಯಲ್ಲಿ ನೀರು ತುಂಬಿ ಹರಿಯಿತು. ಮಾಂಬಳ್ಳಿ ಗ್ರಾಮದಲ್ಲಿ ಕೊಳ್ಳೇಗಾಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಹಳ್ಳದಲ್ಲಿ ಮಳೆ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು.

ಮಳೆ ಬೀಳುತ್ತಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಬೀರಿದ್ದು ರೈತರು ದ್ವಿದಳ ಧಾನ್ಯಗಳನ್ನು ಬಿತ್ತಲು ಜಮೀನುಗಳನ್ನು ಹದ ಮಾಡಿಕೊಳ್ಳುವುದರಲ್ಲಿ ತಲ್ಲೀನರಾಗಿದ್ದರು. ಪಟ್ಟಣದ ಬಳೇಪೇಟೆಯ ದೊಡ್ಡ ಚರಂಡಿಯಲ್ಲಿ ಕಸಕಡ್ಡಿ ಹೂಳು ತುಂಬಿದ್ದರಿಂದ ನೀರು ಸರಾಗವಾಗಿ ಚಲಿಸದೆ ಅವ್ಯವಸ್ಥೆಗೆ ಕಾರಣವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net