ಯಲ್ಲಾಪುರ ಎಪಿಎಂಸಿಗೆ ಎಂ.ಜಿ. ಭಟ್ಟ ಅಧ್ಯಕ್ಷ

11 YLP 02
Published on

ಯಲ್ಲಾಪುರ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ ಎಂ.ಜಿ. ಭಟ್ಟ ಸಂಕದಗುಂಡಿ ಹಾಗೂ ಉಪಾಧ್ಯಕ್ಷರಾಗಿ ರಾಘವೇಂದ್ರ ಗೊಂದಿ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ. ಗುರುವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಡಿ.ಜಿ. ಹೆಗಡೆ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸದಸ್ಯರು, ಬಿಜೆಪಿ ಮುಖಂಡರು ಶುಭ ಕೋರಿದರು. ಬಿಜೆಪಿ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ, ಎಪಿಎಂಸಿ ನಿರ್ದೇಶಕರಾದ ಉಮೇಶ ಭಾಗ್ವತ, ಮುರಲಿ ಹೆಗಡೆ, ರಾಮಚಂದ್ರ ಮುದ್ದೇಪಾಲ, ಸದಾನಂದ ಭಟ್ಟ, ಗೋಪಾಲಕೃಷ್ಣ ಗಾಂವ್ಕರ, ಹೇರಂಬ ಹೆಗಡೆ, ಸುಬ್ರಾಯ ಮರಾಠಿ, ಪರಮೇಶ್ವರ ಗೌಡ, ವಿಶ್ವನಾಥ ಪಾಟಣಕರ, ಲಾರೆನ್ಸ್ ಸಿದ್ದಿ, ಪ್ರಭಾ ಪ್ರಕಾಶ ಭಾಗ್ವತ, ಸುನಂದಾ ಕೃಷ್ಣ ಹೆಗಡೆ, ಜಿ.ಪಂ. ಮಾಜಿ ಸದಸ್ಯ ವಿಜಯ ಮಿರಾಶಿ, ಎಪಿಎಂಸಿ ಕಾರ್ಯದರ್ಶಿ ಕೃಷ್ಣಕಾಂತ ನಾಯ್ಕ ಇತರರಿದ್ದರು.

ಸಿದ್ದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕೃಷ್ಣ ಅಧ್ಯಕ್ಷ: ಸಿದ್ದಾಪುರ ತಾಲೂಕು ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ)ಯ ಅಧ್ಯಕ್ಷರಾಗಿ ಕೃಷ್ಣ ಕರಡಿ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ವಿಜಯಲಕ್ಷ್ಮೀ ಮಂಜುನಾಥ ಭಟ್ಟ ಅವರು ಗುರುವಾರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ಮಂಜುಳಾ ಭಜಂತ್ರಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿಯ ಎಲ್ಲ ನಿರ್ದೇಶಕರು, ಕಾರ್ಯದರ್ಶಿ ಎಂ.ಜಿ. ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net