ಯಲ್ಲಮ್ಮದೇವಿ ದೇವಸ್ಥಾನ ಜಲಾವೃತ

05
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಸುಕ್ಷೇತ್ರ ಕೊಕಟನೂರ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ ಜಲಾವೃತವಾಗಿದೆ. ಬಾರಿ ಪ್ರಮಾಣದ ಮಳೆಗೆ ಸಮೀಪದ ಯಲ್ಲಮ್ಮವಾಡಿ ಕೆರೆ ಭರ್ತಿಯಾಗಿ ಹೆಚ್ಚುವರಿ ನೀರು ಹಿರೇಹಳ್ಳಕ್ಕೆ ಸೇರಿದೆ.

ಬಳಿಕ ನೀರಿನ ಪ್ರಮಾಣ ಹೆಚ್ಚಾಗಿ ದೇವಸ್ಥಾನಕ್ಕೆ ನುಗ್ಗಿದೆ. ದೇವಸ್ಥಾನದ ಅಕ್ಕಪಕ್ಕದಲ್ಲಿ ಹೂಡಿದ್ದ ಟೆಂಟ್‌ಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ವ್ಯಾಪಾರಸ್ಥರಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ದೇವಿ ದರ್ಶನಕ್ಕೆ ಬಂದ ಸಹಸ್ರಾರು ಭಕ್ತರು ತೊಂದರೆ ಅನುಭವಿಸಿದರು. ಕೊಯ್ಲಿಗೆ ಬಂದಿದ್ದ ಮೆಕ್ಕೆಜೋಳ, ಸಜ್ಜೆ, ಸೆಂಗಾ ತೊಯ್ದು ರೈತರಲ್ಲಿ ಆತಂಕ ಮೂಡಿಸಿದೆ.

ಮಳೆ ವಿವಿರ: ಅಥಣಿ ಎಚ್‌ಬಿಸಿ 34.00 ಮಿ.ಮೀ., ತೆಲಸಂಗ 46.03 ಮಿ.ಮೀ., ಖೋತನಟ್ಟಿ 44.04 ಮಿ.ಮೀ., ಸುಟ್ಟಟ್ಟಿ 43.02 ಮಿ.ಮೀ., ಮದಬಾವಿ 45.00 ಮಿ.ಮೀ., ಮಲಾಬಾದ 13.02 ಮಿ.ಮೀ., ಸತ್ತಿ 24.00 ಮಿ.ಮೀ. ಮಳೆ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net