ಯಲವಿಗಿ ಸೀಲ್​ಡೌನ್ ಪ್ರದೇಶಕ್ಕೆ ಎಸಿ ಭೇಟಿ

24 svr 03
Published on

ಸವಣೂರ: ತಾಲೂಕಿನ ಯಲವಿಗಿ ಗ್ರಾಮದ ಸೀಲ್​ಡೌನ್ ಪ್ರದೇಶಕ್ಕೆ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಹಾಗೂ ಅಧಿಕಾರಿಗಳ ತಂಡ ಭಾನುವಾರ ಭೇಟಿ ನೀಡಿ ಪರಿಶೀಲಿಸಿತು.

ಕರೊನಾ ಸೋಂಕಿತೆ ಮನೆಯ ಸುತ್ತಲೂ 100 ಮೀ. ವ್ಯಾಪ್ತಿಯಲ್ಲಿ ವಾಸಿಸುವ ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲು ವಿಶೇಷ ಆರೋಗ್ಯ ಕೇಂದ್ರ ತೆರೆಯಲಾಗಿದೆ. ಸ್ಥಳೀಯ ನಿವಾಸಿಗಳ ಸರ್ವೆ ಕಾರ್ಯ ಹಾಗೂ ಜೀವನಾವಶ್ಯಕ ವಸ್ತುಗಳ ಸರಬರಾಜಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪಿಎಸ್​ಐ ಜಿ.ಎಂ. ಶಶಿಧರ, ಟಿಎಚ್​ಒ ಡಾ. ಚಂದ್ರಕಲಾ ಜೆ., ತಾಪಂ ಎಡಿ ಎಸ್.ಎಚ್.ಅಮರಾಪೂರ, ಕಂದಾಯ ನಿರೀಕ್ಷಕರಾದ ನಾಗರಾಜ ಸೂರ್ಯವಂಶಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net