

ಯಳಂದೂರು: ಯರಗಂಬಳ್ಳಿ ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷರಾಗಿ ಶಾಂತಮ್ಮ ಶುಕ್ರವಾರ ಆಯ್ಕೆಯಾದರು.
ಒಟ್ಟು 14 ಸದಸ್ಯರಿರುವ ಈ ಪಂಚಾಯಿತಿಗೆ ಅಧ್ಯಕ್ಷರಾಗಿದ್ದ ಭಾಗ್ಯಮ್ಮ ಅವರ ವಿರುದ್ಧ ಫೆ.24ರಂದು 13 ಸದಸ್ಯರು ಅವಿಶ್ವಾಸವನ್ನು ತಂದಿದ್ದರು. ಹಾಗಾಗಿ ಅವರು ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಂಡಿದ್ದರು. ಈ ಹಿನ್ನೆಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷರಾಗಿದ್ದ ಶಾಂತಮ್ಮ ಅವರನ್ನು ಪ್ರಭಾರ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಪಿಡಿಒ ಮಂಜುನಾಥ್, ಸದಸ್ಯರಾದ ಡಿ.ಸಿ.ಬಾಬು, ಶೋಭಾ ಮಹೇಶ್, ಸಿದ್ದರಾಜು, ಮಲ್ಲಿಕಾರ್ಜುನಸ್ವಾಮಿ, ಮಹದೇವಮ್ಮ, ಸವಿತಾ, ನಿಂಗರಾಜು, ಶೀಲಮ್ಮ. ಮಹದೇವಮ್ಮ, ಸುಧಾ ಮುಖಂಡರಾದ ಸೋಮಣ್ಣ, ಮಲ್ಲಪ್ಪ ಮತ್ತಿತರರಿದ್ದರು.