ಯತ್ನಾಳ್ಗ್ಗೆಅವಾಚ್ಯ ಪದ ಬಳಕೆ ಮಾಡಿದ ಕಾಶಪ್ಪನವರ

images
ಶಾಸಕ ವಿಜಯಾನಂದ ಕಾಶಪ್ಪನವರ,
Published on

ಬಾಗಲಕೋಟೆ: ಮುಧೋಳದ ಗಣೇಶ ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್ ಹಾಗೂ ಔರಂಗಜೇಬ್ ಬಗ್ಗೆ ಅವಾಚ್ಯ ಪದ ಬಳಿಕ ಮಾಡಿ ಕಿಡಿಕಾರಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ದವೂ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಅದ ಪದ ಪ್ರಯೋಗದ ಮೂಲಕ ಅವಾಚ್ಯವಾಗಿ ಬೈದಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಹುನಗುಂದ ಶಾಸಕ ಕಾಶಪ್ಪನವರ, ಟಿಪ್ಪು ದೇಶ ಕಂಡ ಽÃರ-ವೀರ. ಅವರ ಬಗ್ಗೆ ಯತ್ನಾಳ್ ಬಾಯಿಗೆ ಬಂದಂತೆ ಮಾತನಾಡಿದ್ದರಲ್ಲ. ಈಗ ನಾನು ಅದೇ ಪ್ರಶ್ನೆಯನ್ನು ಯತ್ನಾಳ್‌ಗೆ ಮಾಡುತ್ತೇನೆ ಎಂದು ನಿಂದಿಸಿದರು.

ಏನೂ ಸಂಬಂಧ ಸೂತ್ರ ಇಲ್ಲದೇ ಸುಮ್ಮನೆ ಧರ್ಮದ ಆಧಾರದ ಮೇಲೆ ಮಾತನಾಡಿದ್ದಾರೆ. ಇದನ್ನು ಈ ಬಿಜೆಪಿಯವರು ಬಿಡಬೇಕು. ನಾವು ಭಾರತದಲ್ಲಿ ಇದ್ದೇವೆ. ಇಲ್ಲಿನ ತತ್ವ ಸಿದ್ದಾಂತವೇನು? ಪ್ರಜಾಪ್ರಭುತ್ವವೇನು? ಜಾತ್ಯಾತೀತತೆ ಎಂದರೇನು ತಿಳಿದುಕೊಳ್ಳಬೇಕು. ಇವರ ಕೂಡ ಪವಿತ್ರವಾದ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಽಕಾರಿ ಸ್ವೀಕಾರ ಮಾಡಿರುತ್ತಾರಲ್ಲ. ಆ ಸಂವಿಧಾನದ ಬಗ್ಗೆ ಗೌರವ ಇದೆಯಾ ಇವರಿಗೆ? ಇದಕ್ಕೆ ಮುಚ್ಚಿಕೊಂಡು ಇರಬೇಕು ಎಂದು ಜಾಡಿಸಿದರು.

ಇನ್ನು ಬಾಗಲಕೋಟೆ ಜಿಲ್ಲೆಯಲ್ಲೂ ಸಹ ಪ್ಯಾಲಿಸ್ಟÊೆನ್ ಧ್ವಜ ಹಿಡಿದು ತಿರುಗಿಸಿದ ಬಗ್ಗೆ ಎದುರಾದ ಪ್ರಶ್ನೆಗೆ, ಈ ಬಿಜೆಪಿಯವರಿಗೆ ಧರ್ಮ ಆಧಾರಿತ ರಾಜಕಾರಣ ಬೇಕು. ಯಾಕೆ ಒಂದೇ ಧರ್ಮದ ಮೇಲೆ ಆರೋಪ ಮಾಡುತ್ತಾರೆ? ಯಾರು ಪ್ಯಾಲಿಸ್ಟÊೆನ್ ಧ್ವಜ ಹಾರಿಸಿದ್ದಾರಂತೆ. ಅಲ್ಲಿ ಅಽಕಾರಿಗಳು ಇದ್ದಾರೆ, ಪೊಲೀಸರು ಇದ್ದಾರೆ. ಅವರು ಕ್ರಮ ತೆಗೆದುಕೊಳ್ಳುತ್ತಾರೆ. ಯಾವುದೋ ತಪ್ಪು ಆಗಿದೆ ಎಂದು ಮುಖ್ಯಮಂತ್ರಿಗಳ ಮೇಲೆ ಆರೋಪ ಮಾಡುವುದು ಸರಿಯಲ್ಲ. ಇವರು(ಬಿಜೆಪಿ) ಅಽಕಾರದಲ್ಲಿ ಇದ್ದಾಗ ಏನು ಆಗಿಯೇ ಇಲ್ಲವೆ? ಪಾಪ ಅಲ್ಪಸಂಖ್ಯಾತರು ಭಾರತದ ಸಮುದಾಯ ಅಲ್ವಾ? ಅವರು ಸ್ವಾತಂತ್ರ‍್ಯ ಹೋರಾಟ ಮಾಡಿಲ್ವಾ? ಬಿಜೆಪಿಯವರು ಇಂಡಿಯಾಗೇಟ್ ಮೇಲೆ ಹೆಸರು ನೋಡಲಿ. ಈ ದೇಶಕ್ಕಾಗಿ ಎಷ್ಟು ಯೋಧರು ಪ್ರಾಣ ತ್ಯಾಗ ಮಾಡಿದ್ದಾರೆ. ಅದರಲ್ಲಿ ಅಲ್ಪಸಂಖ್ಯಾತರು ಜಾಸ್ತಿ ಇದ್ದಾರೆ. ಮತ್ತೆ ಇವತ್ತ್ಯಾಕೆ ಅವರು ಬೇಡ ಇವರಿಗೆ? ದೇಶ ಒಡೆಯುವ ಕೆಲಸ ಯಾಕೆ ಮಾಡುತ್ತಾರೆ? ಯಾವುದೇ ವಿಷಯ ತೆಗೆದುಕೊಂಡರೂ ಇವರಿಗೆ ಅಲ್ಪಸಂಖ್ಯಾತರೆ ಟಾರ್ಗೆಟ್ ಮಾಡುತ್ತಾರೆ. ಕಾಂಗ್ರೆಸ್ ನವರು ಅವರಿಗೆ ಬೆಂಬಲ ಕೊಟ್ಟಿದ್ದಾರೆಂದು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net