ಯಕ್ಷಗಾನ ವಿಶ್ವಕೋಶ ಹೊರತರಲು ಕ್ರಮ

13sirsi4
Published on

ಶಿರಸಿ: ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಯಕ್ಷಗಾನ ಕಲೆಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ನಿಟ್ಟಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯು ಯಕ್ಷಗಾನ ವಿಶ್ವಕೋಶವನ್ನು ಹೊರತರಲು ಕ್ರಮವಹಿಸಿದೆ ಎಂದು ಅಕಾಡೆಮಿ ನೂತನ ಅಧ್ಯಕ್ಷ ಜಿ.ಎಲ್. ಹೆಗಡೆ ಕುಮಟಾ ಹೇಳಿದರು.

ನಗರದಲ್ಲಿ ಗುರುವಾರ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಗೌರವ ಸ್ವೀಕರಿಸಿ ಅವರು ಮಾತನಾಡಿದರು, ‘ವಿಶ್ವಕೋಶ ರಚನೆಯಿಂದ ಯಕ್ಷಗಾನಕ್ಕೆ ಸಂಬಂಧಿಸಿದ ಸಮಗ್ರ ಚಿತ್ರಣ ದೊರೆಯಲಿದೆ. ಈ ಸಂಬಂಧ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ದಿ. ಪೊ›. ಎಂ.ಎ. ಹೆಗಡೆ ನೇತೃತ್ವದಲ್ಲಿ ಅಕಾಡೆಮಿ ಸದಸ್ಯರು ರ್ಚಚಿಸಿ ವಿಶ್ವಕೋಶ ಹೊರತರುವ ಬಗ್ಗೆ ಅಂತಿಮ ತೀರ್ವನಕ್ಕೆ ಬಂದಿದ್ದರು. ಈ ಸಂಬಂಧ ಅಕಾಡೆವಿಯು ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಕಳುಹಿಸಿಕೊಟ್ಟಿದೆ. ಶೀಘ್ರ ಕಾರ್ಯಾನುಷ್ಠಾನದ ಬಗ್ಗೆ ಸರ್ಕಾರದ ಜತೆ ಮಾತುಕತೆ ಮಾಡಲಾಗುವುದು’ ಎಂದರು.

ವಿಶ್ವಕೋಶದಲ್ಲಿ ಯಕ್ಷಗಾನ ಹುಟ್ಟು, ಬೆಳವಣಿಗೆ, ಅದಕ್ಕೆ ಸಂಬಂಧಿಸಿದ ವ್ಯಾಖ್ಯಾನ, ನೃತ್ಯ ವಿಧಾನ, ತಾಳಮದ್ದಳೆ, ಗೊಂಬೆಯಾಟ, ಮೂಡಲಪಾಯ, ಅರ್ಥಧಾರಿ, ಕೇಳಿಕೆ, ಪ್ರಸಾಧನ, ವಸ್ತ್ರಾಲಂಕಾರ ಸಹಿತ ಇತರ ಪೂರಕ ಮಾಹಿತಿಗಳು ದೊರೆಯಲಿವೆ. ಹಿರಿಯ ಕಲಾವಿದರ ಪರಿಚಯವೂ ಇರಲಿವೆ ಎಂದು ಹೇಳಿದರು.

ಯಕ್ಷಗಾನ ಅಕಾಡೆಮಿ ಉಳಿಯಲು ಯಕ್ಷಗಾನ ನಿರಂತರಾಗಿ ನಡೆಯಬೇಕು. ಯಕ್ಷಗಾನ ಅನ್ನಪೂರ್ಣೆಶ್ವರಿ ಇದ್ದಂತೆ. ಸಾವಿರಾರು ಕುಟುಂಬ ಇದನ್ನೇ ನಂಬಿವೆ. ಕರೊನಾ ಸಂದರ್ಭದಲ್ಲಿ ನಿರಂತರ ಆಟಕ್ಕೆ ಸರ್ಕಾರ ಅನುಕೂಲ ಮಾಡಿಕೊಡಬೇಕು. ಯಕ್ಷಗಾನಕ್ಕೆ ಸಂಬಂಧಿಸಿದಂತೆ ಮ್ಯೂಸಿಯಂ, ಗ್ರಂಥಾಲಯ ಸ್ಥಾಪಿಸಲು ಕ್ರಮವಹಿಸಲಾಗುತ್ತದೆ. ಜಿಲ್ಲೆಗೊಂದು ರಂಗಮಂದಿರ ನಿರ್ವಣಕ್ಕೂ ಆದ್ಯತೆ ನೀಡಲಾಗುತ್ತದೆ.| ಜಿ.ಎಲ್. ಹೆಗಡೆ ಕುಮಟಾ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net