

ಬಾಗಲಕೋಟೆ: ವಿದ್ಯಾರ್ಥಿಗಳು ಮೌಢ್ಯತೆ ಹಾಗೂ ಅಂದ ಶ್ರದ್ಧೆಗಳಿಗೆ ದಾಸರಾಗದೆ ವೈಜ್ಞಾನಿಕ ಚಿಂತನೆಗಳ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳುವಂತೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ.ಟಿ.ಬಿ.ಅಳ್ಳೊಳ್ಳಿ ಹೇಳಿದರು.
ತೋವಿವಿಯ ಆವರಣದಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಹಿರೇಪಡಸಲಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೈಜ್ಞಾನಿಕ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಚನ ಸಾಹಿತ್ಯದ ಮೂಲಕ ಶರಣರು ವಿವರಿಸಿರುವ ಕೆಲ ಮೌಢ್ಯ ಆಚರಣೆಗಳನ್ನು ಹೋಗಲಾಡಿಸುವ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಹಾಯಕ ಅರಣ್ಯ ಸಂರಕ್ಷಣಾಽಕಾರಿ ರೂಪಾ.ವಿ.ಕೆ ಮಾತನಾಡಿ, ಅರಣ್ಯ ಮತ್ತು ಪರಿಸರಕ್ಕೆ ಸಂಬಂಽಸಿದ ಕೆಲ ಮೌಢ್ಯ ಆಚರಣೆಗಳನ್ನು ತಿಳಿಸಿದರು. ಆಯಾ ಮೌಢ್ಯ ಆಚರಣೆಗಳಿಂದ ಧೂರವಿರುವಂತೆ ಹಾಗೂ ಗಿಡಮರಗಳನ್ನು ನೆಡುವುದರ ಮೂಲಕ ಪರಿಸರವನ್ನು ಬೆಳೆಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹಿರೇಪಡಸಲಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪಿ.ಸಿ.ಕಲ್ಯಾಣಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮನೋಬಲವನ್ನು ಬೆಳೆಸಿಕೊಳ್ಳಲು ಈ ತರಹದ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುವಂತೆ ಕರೆ ನೀಡಿದರು. ಸಾಮಾಜಿಕ ಬೆಳವಣಿಗೆಯೊಂದಿಗೆ ವೈಜ್ಞಾನಿಕ ವೆಳವಣಿಗೆಗೂ ಕೂಡ ಹೆಚ್ಚಿನ ಮಹತ್ವವನ್ನು ನೀಡುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ತಾಂತ್ರಿಕ ಸಹಾಯಕ ಆಸೀಫ ಭಾಗವಾನ ಅವರು ಕೆಲ ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳ ಮೂಲಕ ಮೂಢನಂಬಿಕೆಗಳ ಹಿಂದಿನ ವಿಜ್ಞಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರೇಪಡಸಲಗಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯ ವಿ.ಆರ್.ಸುನ್ನೋಳ್ಳಿ, ಸಹ ಶಿಕ್ಷಕರಾದ ಉಮೇಶ ತಳವಾರ, ಅಶ್ವಿನಿ ಗೌಡರ, ಭಾರತಿ ಪಾಟೀಲ, ದ್ವಿ.ದ. ಸಂಗನಗೌಡ ಪಾಟೀಲ ಹಾಗೂ ಬಾಗಲಕೋಟೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಮಹಾನಂದಾ ಕಳಸನ್ನವರ ಪ್ರಾರ್ಥನಾ ಗೀತೆಯ ಮೂಲಕ ಪ್ರಾರಂಭಿಸಲಾಯಿತು. ಈರಣ್ಣ ಬುಳ್ಳಾ, ನಿರೂಪಿಸಿ ವಂದಿಸಿದರು.