ಮೌಢ್ಯ ಬಿಟ್ಟು ಉತ್ತಮ ಶಿಕ್ಷಣ ಪಡೆಯಿರಿ

IMG-20250415-WA0202
Published on

ಹನಗೋಡು: ಮೌಢ್ಯ ಮತ್ತು ಮೂಢನಂಬಿಕೆಗಳನ್ನು ಬಿಟ್ಟು ಜ್ಞಾನದ ಮೇಲೆ ನಂಬಿಕೆ ಇಟ್ಟು ಉತ್ತಮ ಶಿಕ್ಷಣ ಪಡೆಯುವಂತೆ ಜನತೆಗೆ ಹನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜೋಗೇಂದ್ರನಾಥ್ ಸಲಹೆ ನೀಡಿದರು.

ಹನಗೋಡು ಹೋಬಳಿಯ ಕಿರಂಗೂರು-ಅಂಬೇಡ್ಕರ್ ಹೊಸೂರು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜಾತಿ, ಧರ್ಮ, ಪಂಥಗಳ ಆಧಾರದ ಮೇಲೆ ಮನುಷ್ಯರನ್ನು ಮೇಲು-ಕೀಳು ಎಂದು ಪರಿಭಾವಿಸುವ ಮೇಲ್ವರ್ಗದವರ ಅಟ್ಟಹಾಸಕ್ಕೆ ತನ್ನ ಕ್ರಾಂತಿಕಾರಕ ವಿಚಾರಗಳು ಹಾಗೂ ಆದರ್ಶಗಳಿಂದ ಶೋಷಿತರ ಬಾಳಿನಲ್ಲಿ ಪರಿವರ್ತನೆಯ ಹೊಸ ಬೆಳಕು ತಂದವರು ಡಾ.ಬಿ.ಆರ್.ಅಂಬೇಡ್ಕರ್ ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ನಾವು ನಡೆಯಬೇಕಾಗಿದೆ ಎಂದರು.

ಉಪನ್ಯಾಸಕ ಬೀಜಿಗನಹಳ್ಳಿ ನಾಗರಾಜ್ ಮಾತನಾಡಿ, ಸಮ ಸಮಾಜ ನಿರ್ಮಾಣದಲ್ಲಿ ಬಾಬಾ ಸಾಹೇಬರ ಪಾತ್ರ ಬಹಳ ಮುಖ್ಯವಾಗಿದೆ. ಅವರು ದೇಶ-ವಿದೇಶಗಳ 32 ಪದವಿಗಳನ್ನು ಪಡೆದಿದ್ದರೂ ಭಾರತಕ್ಕೆ ಬಂದು ಸಂವಿಧಾನ ರಚನೆ ಮಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸಮಾಜದಲ್ಲಿ ಸಮಾನತೆಯ ಜೀವನ ನಡೆಸುವಂತೆ ತೋರಿಸಿರುವ ಮಹಾನ್ ಚೇತನರಾಗಿದ್ದಾರೆ ಎಂದರು.

ಗ್ರಾಪಂ ಅಧ್ಯಕ್ಷ ಹರೀಶ್, ಯೋಧರಾದ ಹರೀಶ್, ರಾಚಯ್ಯ, ಶಿಕ್ಷಕ ಸತೀಶ್, ದಸಂಸ ಸಂಚಾಲಕ ಕಿರಂಗೂರು ಸ್ವಾಮಿ, ದಸಮಸ ಸದಸ್ಯರಾದ ನಂದಿನಿ, ಶಿವರಾಜ್, ಪ್ರಸನ್ನ, ಮನು, ಧನರಾಜ್, ಗಣೇಶ್, ಬಾಲರಾಜ್, ಅಪ್ಪು ಹಾಗೂ ಜೈ ಭೀಮ್ ಸಂಘದ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net