

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕ. ಮೇರು ವ್ಯಕ್ತಿತ್ವ ಹೊಂದಿದ್ದಾರೆ ಎಂದು ವಿ.ಪ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.
ಮಹಾವೀರ ರಸ್ತೆಯಲ್ಲಿರುವ ತಮ್ಮ ಜನ ಸಂಪರ್ಕ ಕಾರ್ಯಾಲಯದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರು ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವದಲ್ಲಿಯೇ ನಮ್ಮ ದೇಶವು ಪ್ರಗತಿ ಪಥದತ್ತ ನಡೆದಿದ್ದು, ೨೦೪೭ ರಲ್ಲಿ ವಿಶ್ವದ ನಂ.೧ ಸ್ಥಾನಕ್ಕೆ ನಮ್ಮ ದೇಶವು ಬರಲಿದೆ. ಮೋದಿಯವರು ದೇಶದ ಅಭಿವೃದ್ಧಿ ಕಲ್ಪನೆ ಸಾಕಾರ ಗೊಳಿಸಲು ನಾವೆಲ್ಲರೂ ಅವರ ಜೊತೆಗೆ ಕೈ ಜೋಡಿಸಬೇಕು. ಅಽಕಾರಕ್ಕಾಗಿ ತುಷ್ಠೀಕರಣ ಮಾಡುತ್ತಿರುವವರನ್ನು ಽಕ್ಕರಿಸಬೇಕು. ದೇಶವನ್ನು ಒಡೆಯುವ ತಂತ್ರವು ಸಹಿತ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದಿಂದ ನಡೆದ ಮೋದಿಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಶೇಖರ ಮಾನೆ ಅವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಅಂದಾಜು ೧೦೦ ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಪಾಲ್ಗೊಂಡಿ ದ್ದರು. ಹುಟ್ಟು ಹಬ್ಬದ ಅಂಗವಾಗಿ ನಿರ್ಗತಿಕರಿಗೆ ಹಾಸಿಗೆ, ಹೊದಿಕೆಗಳನ್ನು ವಿತರಿಸಲಾಯಿತು.
ನಗರಸಭೆ ಸದಸ್ಯೆ ಭುವನೇಶ್ವರಿ ಕುಪ್ಪಸ್ತ, ಸಂಗನಗೌಡ ಗೌಡರ, ವಿರುಪಾಕ್ಷ ಅಮೃತಕರ, ಮರಿಯಪ್ಪ ಅಂಬಿಗೇರ, ಶೈಲು ಅಂಗಡಿ, ಸುಽÃರ ಜಾಧವ, ಗಿರಿಜಾ, ಶಾಂತಾಬಾಯಿ ಗೋಣಿ, ಉಮಾ ಗವಿಮಠ, ಅನಂತ ಮಳಗಿ, ಸಂಗಣ್ಣ ಕುಪ್ಪಸ್ತ, ಮಂಜು ಬಳೂರಗಿ, ರಾಜು ಚಿತ್ತವಾಡಗಿ, ಮಲ್ಲಿಕಾರ್ಜುನ ಸುರಪುರ, ರಾಜು ನಾಯಕ ಸೇರಿದಂತೆ ಇತರರು ಇದ್ದರು.