ಮೋದಿ ಮಹಾನಾಟಕಕಾರ

bkt-2-2 (2)
Published on

ಬಾಗಲಕೋಟೆ: ರಾಜ್ಯದಲ್ಲಿ ೪೦ ಪರ್ಸೆಂಟ್ ಕಮಿಷನ್ ಗಾಗಿ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆಗೆ ಕಾರಣವಾಗಿ ಸಚಿವ ಸ್ಥಾನ ಕಳೆದುಕೊಂಡ ಈಶ್ವರಪ್ಪ ಒಬ್ಬ ಪೆದ್ದ. ಸಾಕಷ್ಟು ಸಾಕ್ಷಿಗಳು ಕಣ್ಣೇದುರು ಇದ್ದರೂ ಭ್ರಷ್ಟಾಚಾರಕ್ಕೆ ಸಾಕ್ಷಿ ಕೇಳುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಒಬ್ಬ ಮಹಾಭಂಡ. ಇನ್ನೂ ೪೦ ಪರ್ಸೆಂಟ್ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪತ್ರ ಬರೆದರೂ ಒಂದೂ ಕ್ರಮವನ್ನು ತೆಗೆದುಕೊಳ್ಳದ ನರೇಂದ್ರ ಮೋದಿ ಒಬ್ಬ ಮಹಾನಾಟಕಕಾರ, ಸುಳ್ಳುಗಾರ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಜರಿದಿದ್ದಾರೆ.

ನಗರದ ರೋಟರಿ ವೃತ್ತದಲ್ಲಿ ಮಂಗಳವಾರ ಬಾಗಲಕೋಟೆ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ವೈ.ಮೇಟಿ ಪರ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ, ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.

ಪಿಎಸ್‌ಐ, ತಹಶೀಲ್ದಾರ, ಎಸಿ, ಡಿವೈಎಸ್ಪಿ ಕೇಳಿ ನೋಡಿ ಎಷ್ಟು ಲಂಚ ಕೊಟ್ಟು ಬಂದಿದ್ದಾರೆ ಅಂತ ಹೇಳುತ್ತಾರೆ. ನೇಮಕಾತಿಯಲ್ಲಿ ದೊಡ್ಡ ಹಗರಣ ನಡೆಯಿತು. ಕರ್ನಾಟಕ ಇತಿಹಾಸದಲ್ಲಿ ಇಂತಹ ಭ್ರಷ್ಟ ಸರ್ಕಾರ ನೋಡಿರಲಿಲ್ಲ. ಕುಮಾರಸ್ವಾಮಿ ವಿರುದ್ದ ಶಾಸಕರು ಅಸಮಧಾನಗೊಂಡಿದ್ದರು ಹೀಗಾಗಿ ಸಮ್ಮಿಶ್ರ ಸರ್ಕಾರ ಬಿತ್ತು. ಬಿಜೆಪಿಯವರು ದುಡ್ಡು ಕೊಟ್ಟು ಎಂಎಲï‌ಎಗಳನ್ನ ಖರೀದಿ ಮಾಡಿದರು. ಬಿಜೆಯದು ಇದು ಅನೈತಿಕ ಸರ್ಕಾರ. ಬರೀ ಲೂಟಿ ಹೊಡೆಯುವದರಲ್ಲಿ ಕಾಲ ಕಳೆದರು ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಇತಿಹಾಸದಲ್ಲಿ ೪೦ ಪರ್ಸೆಂಟ್ ಸರ್ಕಾರ ಎಂದು ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಪತ್ರ ಬರೆದರು. ಈ ನರೇಂದ್ರ ಮೋದಿ ತುಟಿಕ್, ಪಿಟಿಕ್ ಎನ್ನಲಿಲ್ಲ. ದಾಖಲಾತಿ ಕೊಡಿ ಅಂತ ಎಡಿಜಿಪಿ ಅಮೃತ ಪಾಲ್ ಜೊತೆ ಅನೇಕರು ಜೈಲಿಗೆ ಹೋದರು. ಕೆ.ಎಸ್.ಈಶ್ವರಪ್ಪ ಮಹಾ ಪೆದ್ದ, ಮಹಾ ಭ್ರಷ್ಟಾಚಾರಿ. ಪಾಪ ಬಿಜೆಪಿಯ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಮಾಡಿಕೊಂಡ ಡೆತ್ ನೋಟನಲ್ಲಿ ನನ್ನ ಸಾವಿಗೆ ಈಶ್ವರಪ್ಪ ಕಾರಣ ಅಂತ ಬರೆದಿಟ್ಟ. ಈಶ್ವರಪ್ಪ ರಾಜೀನಾಮೆ ಕೊಟ್ಟರು. ಬಿಜೆಪಿ ಶಾಸಕ ವಿರುಪಾಕ್ಷಪ್ಪ ಮಾಡಾಳ ಮಗ ಅಪ್ಪನ ಪರವಾಗಿ ಲಂಚ ಪಡೆಯುವಾಗ ಸಿಕ್ಕಿಬಿದ್ದರು. ಇದಕ್ಕಿಂತ ಸಾಕ್ಷಿ ಬೇಕಾ ಅಂತ ಪ್ರಶ್ನಿಸಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಭಂಡ, ಮಹಾಭಂಡ. ರಾಜೀನಾಮೆ ಕೊಟ್ಟು ಬರಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಲ್ಕು ವರ್ಷದಲ್ಲಿ ಬಿಜೆಪಿ ಸರ್ಕಾರ ಒಂದು ಮನೆನೂ ಕಟ್ಟಿಸಲಿಲ್ಲ. ಲಂಚ ಬಿಟ್ಟರೇ ಬೇರೆನೂ ಕೆಲಸ ಮಾಡಲ್ಲ. ಅದಕ್ಕೆ ನಾನು ಇವರಿಗೆ ಅಲಿಬಾಬಾ ಚಾಲೀಸ್ ಚೋರ್ ಅಂತ ಕರೆಯೋದು. ಪೆಟ್ರೋಲï, ಡೀಸೆಲï, ಗ್ಯಾಸ್, ಅಗತ್ಯ ವಸ್ತುಗಳು ಗಗನಕ್ಕೆ ಹೋಗಿವೆ. ಜನಸಾಮಾನ್ಯರು ಬದಕಲು ಸಾಧ್ಯವಿಲ್ಲ. ರಕ್ತ ಹಿರುತ್ತಿದ್ದಾರೆ. ಇಂತಹ ಅನಾಹುತ ಮಾಡಲು ಇವರು ಇರಬೇಕಾ? ನಾವು ಬಂದ ತಕ್ಷಣ ಏನೇ ಕಾನೂನಿ ತಾಂತ್ರಿಕ ಸಮಸ್ಯೆ ಇದ್ರು ನಿವಾರಣೆ ಮಾಡುತ್ತೇನೆ. ಬಾಗಲಕೋಟೆ ನಗರ ಹಾಗೂ ಜಿ¯್ಲೆಯ ಸಂತ್ರಸ್ತರಿಗೆ ಪರಿಹಾರ ಕೊಡುತ್ತೇವೆ ಎಂದ ಅವರು, ಎಚ್.ವೈ.ಮೇಟಿ ಅವರಿಗೆ ನೀಡುವ ಪ್ರತಿ ಮತವು ನನಗೆ ಬಂದು ಸೇರುತ್ತದೆ ಎಂದು ಕರೆ ನೀಡಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಸಚಿವ ಅಜಯಕುಮಾರ ಸರನಾಯಕ, ಬಾಗಲಕೋಟೆ ಉಸ್ತುವಾರಿ ಕ್ರೀಸ್ಟೋ-Àರ್ ತಿಲಕ್, ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ. ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಅಶೋಕ ಲಾಗಲೂಟಿ, ನಾಗರಾಜ ಹದ್ಲಿ, ದ್ಯಾಮಣ್ಣ ಗಾಳಿ, ಬಾಯಕ್ಕ ಮೇಟಿ, ಬಸವರಾಜ ಮೇಟಿ, ರವೀಂದ್ರ ಕಲಬುರ್ಗಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net