

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಜೀವನದಲ್ಲಿ ಕರ್ನಾಟಕ ರಾಜ್ಯದಲ್ಲಿ ಆಗಿರುವಷ್ಟ ದೊಡ್ಡ ಹಿನ್ನೆಡೆ ಬೇರೆಲ್ಲೂ ಆಗಿಲ್ಲ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಇರುವ ಸಮಸ್ಯೆ ಬಗ್ಗೆ ಬಹಳಷ್ಟು ವಿಚಾರ ಮಾಡಿ ಇದಕ್ಕೆ ಶಾಶ್ವತವಾದ ಪರಿಹಾರ ಕೊಡುತ್ತಾರೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಿಪಕ್ಷ ನಾಯಕನ ಆಯ್ಕೆ ಆಗುತ್ತದೆ. ಲೋಕಸಭೆಯಲ್ಲಿ ಕಳೆದ ಒಂಭತ್ತು ವರ್ಷಗಳಿಂದ ವಿಪಕ್ಷ ನಾಯಕರೇ ಇಲ್ಲವಲ್ಲ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.
ಬೇರೆ ಬೇರೆ ಕೆಲಸಗಳಲ್ಲಿ ಪ್ರಧಾನಮಂತ್ರಿಗಳು ಬ್ಯೂಜಿ ಇದ್ದರೆ. ಹಾಗೆಂದು ಅವರು ಸುಮ್ಮನೆ ಕೂತಿದ್ದಾರೆಂದು ಅನ್ಕೋಬೇಡಿ. ಎಲ್ಲವನ್ನು ಸಾರಾಸಾರಾ ವಿಚಾರ ಮಾಡಿ, ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಿದ್ದಾರೆ. ಆದಿತ್ಯ ಎಲ್ ಎನ ಬಗ್ಗೆ ಯಾರಿಗಾದರೂ ಗೊತ್ತಿತ್ತಾ ಜಿ.೨೦ ಯಶಸ್ವಿಯಾಗಲ್ಲ ಅಂತಿದ್ದರು. ಅವೆಲ್ಲ ಮಾಡಿದ್ದಾರೆ ತಾನೆ ಎಂದರು.
ರಾಜ್ಯದಲ್ಲಿ ಜೆಡಿಎಸ ಜೊತೆಗಿನ ಮೈತ್ರಿಯಿಂದ ಗೊಂದಲ ಆಗುತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾಜಿ ಶಾಸಕರು, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಅದನ್ನು ಮೇಲಿನವರು ಮಾತನಾಡುತ್ತಿದ್ದಾರೆ. ಜೆಡಿಎಸ್‌ನವರೇ ದೋಸ್ತಿಗೆ ಮುಂದಾಗಿದ್ದಾರೆ. ಕಳೆದ ಸಲ ೨೮ ಸ್ಥಾನಗಳ ಪೈಕಿ ನಾವು ೨೫ರಲ್ಲಿ ಗೆದ್ದಿದ್ದೇವು. ಅವರು(ಜೆಡಿಎಸ್) ಈ ಸಲ ಓಟಿನ ಲೆಕ್ಕಾಚಾರ ಮಾಡಿದ್ದಾರೆ. ಜೆಡಿಎಸ್, ಬಿಜೆಪಿಗೆ ಎಷ್ಟು ಮತಗಳು ಬಂದಿವೆ ಎನ್ನುವ ಲೆಕ್ಕಾಚಾರ. ಇದರಿಂದ ಮೈತ್ರಿಯಾಗದೇ ಇದ್ದರೆ ತೊಂದರೆ ಆಗುತ್ತದೆ ಎಂದು ಅವರೇ ಮೊದಲು ಮೈತ್ರಿಗೆ ಮುಂದಾಗಿದ್ದಾರೆ. ಹೊಂದಾಣಿಕೆಯನ್ನು ಜೆಡಿಎಸ್‌ನವರು ಮಾಡಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.