

ಬಾಗಲಕೋಟೆ: ಕೃಷ್ಣಾ ನದಿ ಖಾಲಿ ಆಗಿರುವ ಹಿನ್ನಲೆ ಮೊಸಳೆಯಿಂದ ಜಮೀನಿನಲ್ಲಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಮೊಸಳೆ ಸೆರೆಹಿಡಿದು ಆತಂಕ ದೂರ ಮಾಡಿರುವ ಘಟನೆ ಜಮಖಂಡಿ ತಾಲೂಕಿನ ಬಿದರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷ್ಣಾ ನದಿ ಪಕ್ಕದ ಜಮೀನಿನಲ್ಲಿ ಗುರುವಾರ ಬೃಹತ್ ಮೊಸಳೆ ಪ್ರತ್ಯಕ್ಷ ಆಗಿದ್ದು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಸೇರಿ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ.
ಹಗ್ಗ ಹಾಕಿ ಮೊಸಳೆ ಸೆರೆದಿಡಿದು ಬಳಿಕ ಮೊಸಳೆಗೆ ಟೇಪ್ ಸುತ್ತಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮೊಸಳೆಯನ್ನು ಆಲಮಟ್ಟಿ ಜಲಾಶಯದಲ್ಲಿ ಬಿಡಲಿದ್ದಾರೆ.
ನದಿಗಳಲ್ಲಿ ನೀರು ಖಾಲಿ ಆಗುತ್ತಿದ್ದು ದಡದ ಗ್ರಾಮಗಳಲ್ಲಿ ಹತ್ತಿರ ಇರುವ ಜಮೀನುಗಳಲ್ಲಿ ಮೊಸಳೆ ಬರುವ ಆತಂಕ ಉಂಟಾಗಿದೆ.