ಮೊಟ್ಟೆ ಜವಾಬ್ದಾರಿ ಮುಖ್ಯಗುರುವಿಗೆ ಬೇಡ

SHASHIL G NAMOSHI
Published on

ಕಲಬುರಗಿ: ಕಲ್ಯಾಣ ಕರ್ನಾಟಕ ಸೇರಿ ರಾಜ್ಯಾದ್ಯಂತ ಸರ್ಕಾರಿ ಶಾಲೆ ಮಕ್ಕಳಿಗೆ ನೀಡುತ್ತಿರುವ ಮೊಟ್ಟೆ ಹಾಗೂ ಬಾಳೆ ಹಣ್ಣು ವಿತರಿಸುವ ಕರ್ತವ್ಯಕ್ಕೆ ಮುಖ್ಯ ಶಿಕ್ಷಕರ ನಿಯೋಜನೆ ಕೈಬಿಟ್ಟು, ಎನ್‌ಜಿಒಗಳನ್ನು ನೇಮಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಒತ್ತಾಯಿಸಿದರು.

ಸರ್ಕಾರದಿಂದ ಎರಡು ದಿನ ಮತ್ತು ಅಜೀಮ್ ಪ್ರೇಮ್ ಜಿ Ëಂಡೇಷ್‌ನಿAದ ನಾಲ್ಕು ದಿನ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಿಸುತ್ತಿರುವುದು ಉತ್ತಮ ಯೋಜನೆಯಾಗಿದೆ. ಆದರೆ, ಅದರ ಪೂರ್ಣ ಕೆಲಸ ಶಿಕ್ಷಕರಿಗೆ ವಹಿಸಿರುವುದು ಶಾಲಾ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಹಾಗೂ ಮುಖ್ಯ ಗುರುಗಳ ಕಾರ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಅಲ್ಲದೆ ಶಾಲೆಯಲ್ಲಿ ಪಾಠ ಪ್ರವಚನ ಕುಂಠಿತವಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯ ಶಿಕ್ಷಕರ ಬದಲು ಖಾಸಗಿ ಸೇವಾ ಸಂಸ್ಥೆಗಳಿಗೆ (ಎನ್‌ಜಿಒ) ಮೊಟ್ಟೆ ಪೂರೈಕೆ ಮತ್ತು ವಿತರಣೆ ಮಾಡುವ ಕೆಲಸ ವಹಿಸಿದರೆ ಉತ್ತಮವಾಗಲಿದೆ. ಆಗ ಮುಖ್ಯ ಗುರುಗಳು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಲು, ಬೇರೆ ಚಟುವಟಿಕೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಲಾಗಿದೆ. ಇದುವರೆಗೆ ಸ್ಪಂದನೆ ಸಿಕ್ಕಿಲ್ಲ. ಇದರಲ್ಲಿ ರಾಜಕೀಯ ಮಾಡುವುದು ಬೇಡ. ಬೆಳಗಾವಿ ಅಧಿವೇಶನ ಪ್ರಾರಂಭಕ್ಕೆ ಮುನ್ನ ಈ ಕೆಲಸ ಮಾಡಬೇಕು. ಇಲ್ಲದಿದ್ದರೆ ಸದನದಲ್ಲಿ ಗಮನ ಸೆಳೆಯುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net