ಮೈನೆವಿರೆಳೆಸಿದ ಹಗ್ಗ ಜಗ್ಗಾಟ

bkt-10-5
Published on

ಬಾಗಲಕೋಟೆ: ನಗರದ ಪ್ರತಿಷ್ಥಿತ ಬಸವವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಂಕ್ರಾಂತಿ ಸಿರಿ 2024 ಸಂಭ್ರಮ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ನಡೆದ ಹಗ್ಗ ಜಗ್ಗಾಟ ಸ್ಪರ್ದೇ ನೋಡುಗರ ಮೈನೆವಿರೆಳೆಸಿದಂತೆ ಕಂಡು ಬಂತು.

ಬಸವೇಶ್ವರ ಕಾಲೇಜು ಮೈದಾನದಲ್ಲಿ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಾಂಸ್ಕೃತಿಕ ಚಟುವಟಿಕೆ ಸಮಿತಿ ಯಿಂದ ಸಂಕ್ರಾಂತಿ ಸಿರಿ 2024 ರ ಸಂಭ್ರಮ ಕಾರ್ಯಕ್ರಮ ನಿಮಿತ್ಯ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ದೇಗಳನ್ನು ಹಮ್ಮಿಕೊಂಡ ಹಿನ್ನೆಲೆಯಲ್ಲಿ ಬುಧವಾರ ಬಸವೇಶ್ವರ ಕಾಲೇಜು ಮೈದಾನದಲ್ಲಿ ವಿದ್ಯಾರ್ಥಿಗಳ ಹಗ್ಗ ಜಗ್ಗಾಟ ಸ್ಪರ್ದೇಗೆ ಮಹಾವಿದ್ಯಾಲಯ ಪ್ರಾಚಾರ್ಯ ಎಸ್,ಆರ್.ಮೂಗನೂರಮಠ ಚಾಲನೆ ನೀಡಿದರು,
ಹಗ್ಗ ಜಗ್ಗಾಟ ಸ್ಪರ್ದೆಯಲ್ಲಿ ವಿದ್ಯಾರ್ಥಿಗಳ 4 ತಂಡ ಹಾಗೂ ವಿದ್ಯಾರ್ಥಿನಿಗಳ 4 ತಂಡ ಸೇರಿದಂತೆ 8ತಂಡಗಳು ಬಾಗವಹಿಸಿದ್ದರು. ಶಿಕ್ಷಕ ವೃಂದವೂ ಕೂಡಾ ಹಗ್ಗ ಜಗ್ಗಾಟದಲ್ಲಿ ಪಾಲ್ಗೋಂಡು ಸಂಭ್ರಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net