ಮೇಲುಕೋಟೆಯಲ್ಲಿ ನರಕ ಚತುರ್ದಶಿ ಉತ್ಸವ

1002232545
Published on

ಮೇಲುಕೋಟೆ: ಚೆಲುವನಾರಾಯಣಸ್ವಾಮಿಗೆ ನರಕ ಚತುರ್ದಶಿ ಉತ್ಸವ ರಾತ್ರಿ ವೈಭವದಿಂದ ನೆರವೇರಿತು. ದೇವಾಲಯದಿಂದ ದೀಪಾವಳಿ ಮಂಟಪಕ್ಕೆ ಸ್ವಾಮಿಯ ಉತ್ಸವ ಸಾಗಿದ ನಂತರ ಅಲ್ಲಿ ತಿರುವಾರಾಧನೆ ಸಮೇತ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.

ನಂತರ ಸವಿತಾ ಸಮಾಜದವರ ವಿಶೇಷ ಮಂಗಳವಾದ್ಯ ಹಾಗೂ ವೈವಿಧ್ಯಮಯ ಪಟಾಕಿಗಳ ಚಿತ್ತಾರದೊಂದಿಗೆ ನಾಲ್ಕೂ ಬೀದಿಗಳಲ್ಲಿ ಉತ್ಸವ ನೆರವೇರಿತು.

ಉತ್ಸವ ಬೀದಿಗಳಲ್ಲಿ ಸ್ಥಾನೀಕರು ಅರ್ಚಕರ ಮತ್ತು ಕೈಂಕರ್ಯಪರರು ದೇವರ ಉತ್ಸವದ ಮುಂದೆ ವಿಶೇಷ ಪಟಾಕಿಗಳನ್ನು ಸಿಡಿಸಿ ಮೆರಗು ನೀಡಿದರು. ಇದಕ್ಕೂ ಮೊದಲು ಮುಂಜಾನೆ ನರಕ ಚತುರ್ದಶಿ ಪ್ರಯುಕ್ತ ವೇದಮಂತ್ರದೊಂದಿಗೆ ಅಭಿಷೇಕ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net