

ಮೇಲುಕೋಟೆ:ಚೆಲುವನಾರಾಯಣನ ಕ್ಷೇತ್ರ ಮೇಲುಕೋಟೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರ ನೀಡಲು ಶ್ರಮಿಸುತ್ತೇನೆ ಎಂದು ಭಾರತ ಸರ್ಕಾರದ ರಾಜ್ಯಸಭಾ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರದೀಪ್ ಚತುರ್ವೇದಿ ಹೇಳಿದರು.
ಭಾನುವಾರ ಮೇಲುಕೋಟೆಗೆ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿ ದರ್ಶನ ಪಡೆದು ಮಾತನಾಡಿದರು.
ಚೆಲುವನಾರಾಯಣಸ್ವಾಮಿ ದರ್ಶನ ಮಾಡಿ ಅತ್ಯಂತ ತೃಪ್ತಿ ಹೊಂದಿದ್ದೇವೆ. ಇಲ್ಲಿನ ಪಾಕೃತಿಕ ಸೌಂದರ್ಯ ಉನ್ನತವಾಗಿದ್ದು, ಪಕೃತಿಯನ್ನು ಕಾಪಾಡಿಕೊಂಡು ಕ್ಷೇತ್ರದ ಪ್ರವಾಸೋದ್ಯಮ ಚಟುವಟಿಕೆಯನ್ನು ಉತ್ತೇಜಿಸಬೇಕಾದ ಅಗತ್ಯವಿದೆ. ಹೀಗಾಗಿ ಸಂಬಂಧಿಸಿದ ಇಲಾಖೆಗಳ ಉನ್ನತ ಅಧಿಕಾರಿಗಳೊಡನೆ ಶೀಘ್ರವಾಗಿ ಮತ್ತೆ ಮೇಲುಕೋಟೆಗೆ ಭೇಟಿ ನೀಡುವ ಸಂಕಲ್ಪ ಮಾಡಿದ್ದೇನೆ ಎಂದರು.
ಲೋಕಸಭಾ ಸಚಿವಾಲಯದ ಹಿರಿಯ ಅಧಿಕಾರಿ ತ್ರಿಪಾಠಿ ಇತರರೂ ಭಾಗವಹಿಸಿದ್ದರು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್, ಪೊಲೀಸ್ ಇನ್ಸ್‌ಪೆಕ್ಟರ್ ಸುಮಾರಾಣಿ, ಗ್ರಾಮ ಆಡಳಿತಾಧಿಕಾರಿ ರಮೇಶ್ ಮತ್ತಿತರರಿದ್ದರು.