

ಬಾಗಲಕೋಟೆ: ನಾವು ಚುನಾವಣೆಯಲ್ಲಿ ಭರವಸೆ ನೀಡಿದಂತೆ ಬಾಗಲಕೋಟೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸರ್ಕಾರ ಸಮ್ಮತಿಸಿದೆ. ಈಗಾಗಲೇ ವಿಶೇಷ ಅಽಕಾರಿ ನೇಮಕ ಮಾಡಿ ಆದೇಶಿಸಿದೆ. ಬಿಟಿಡಿಎ ದಿಂದ ಮೆಡಿಕಲ್ ಕಾಲೇಜು ಜಾಗ ಹಸ್ತಾಂತರ ಮಾಡಲು ನಿರ್ಧರಿಸಲಾಗಿದೆ ಎಂದು ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಹೇಳಿದರು.
ನಗರದ ಬಿಟಿಡಿಎ ಸಭಾಭವನದಲ್ಲಿ ಮಂಗಳವಾರ ಬೋರ್ಡ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾತ್ಕಾಲಿಕವಾಗಿ ಖಾಲಿ ಇರುವ ಶಾಲಾ ಕಟ್ಟಡ, ಕಚೇರಿ, ಕಾಲೇಜಿಗೆ ನೀಡಲು ಸೂಚಿಸಲಾಗಿದೆ. ಸೆಕ್ಟರ್ ೧ ಮತ್ತು ೧೩ ತೋಟಗಾರಿಕಾ ವಿವಿಗೆ ನೀಡಲಾಗಿತ್ತು, ಅವುಗಳನ್ನು ರದ್ದುಪಡಿಸಿ ಮೆಡಿಕಲ್ ಕಾಲೇಜಿಗೆ ನೀಡಲಾಗುವುದು. ಈಗಾಗಲೇ ಬೋಡ್ ð ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.
ಇನ್ನು ಮಾರುಕಟ್ಟೆ ನಿರ್ಮಿಸಲು ೨೦೦ ಎಕರೇ ಜಮೀನು ಮೀಸಲಿಡಲು ಯೋಜನೆ ರೂಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಅಂತಿಮ ಸ್ವರೂಪ ನೀಡಲಾಗುವುದು. ಬಾಣಾಪುರ-ಗದ್ದನಕೇರಿ ಹೆದ್ದಾರಿ ನಿರ್ಮಿಸಲು ಮೇಲ ಸೇತುವೆ ಮಾಡಲಾಗುತ್ತಿದೆ. ಇದರಿಂದ ಹಳೇ ಬಾಗಲಕೋಟೆ ನಗರದ ದೊಡ್ಡ ಸಾಬ್ಬಣ್ಣಿ ಓಣಿ ನಿವಾಸಿಗಳು ಮನೆ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅವಕಾಶ ಮಾಡಿಕೊಡಲಾಗುವುದು. ಬೇರೆ ಮಾರ್ಗದಲ್ಲಿ ಬಿಟಿಡಿಎದಿಂದ ಜಮೀನು ಒದಗಿಸಿ ಅವರಿಗೆ ನಿವೇಶನ ನೀಡಲಾಗುವುದು ಎಂದು ತಿಳಿಸಿದರು.
ಮಾಲ್ ಮಾದರಿ ಬೃಹತ್ ಕಟ್ಟಡ ನಿರ್ಮಿಸಲು ನಗರಸಭೆ ಬಿಟಿಡಿಎಗೆ ಕೋರಿದೆ. ಇದಕ್ಕಾಗಿ ನಗರಸಭೆ ಬಳಿ೩೮ ಕೋಟಿ ರೂ.,ಇದ್ದು, ನಗರಸಭೆ ೭ ಎಕರೇ ಜಮೀನು ಕೇಳಿದ್ದು, ಪರಿಶೀಲನೆ ಮಾಡಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಅಲ್ಲದೆ ೨೦ ಕ್ಕೂ ಹೆಚ್ಚು ಸಂತ್ರಸ್ತರಿಗೆ ಈ ಸಂದರ್ಭದಲ್ಲಿ ನಿವೇಶನ ಹಂಚಿಕೆ ಮಾಡಲಾಯಿತು. ಬಿಟಿಡಿಎ ಮುಖ್ಯ ಇಂಜಿನಿಯರ ಡಿ.ಬಸವರಾಜ, ಡಿಸಿ ಜಾನಕಿ ಕೆ.ಎಂ., ನಗರಸಭೆ ಅಧ್ಯಕ್ಷೆ ಸವಿತಾ ಲೆಂಕ್ಕೆನ್ನವರ ಇತರರು ಇದ್ದರು.