ಮೆಡಿಕಲ್ ಕಾಲೇಜಿಗೆ ಅನುದಾನ ಒದಗಿಸಿ

bkt-24-3
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾಗ್ಯ ಬೆಟಗೇರಿ, ನಗರ ಅಧ್ಯಕ್ಷ ಬಸವರಾಜ ಅಂಬಿಗೇರ, ಸಂಘಟನಾ ಕಾರ್ಯದರ್ಶಿ ಮಲ್ಲು ಕಟ್ಟಿಮನಿ, ರಾಹುಲ್ ಶೆಟ್ಟರ, ಗಣೇಶ ನಾಯಕ ಇದ್ದರು.
Published on

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಗೆ ಘೋಷಣೆಯಾಗಿರುವ ಸರ್ಕಾರಿ ವೈದ್ಯಕೀಯ (ಮೆಡಿಕಲ್) ಕಾಲೇಜು ಕಾರ್ಯಾರಂಭಕ್ಕೆ ಪ್ರಸಕ್ತ ಬಜೆಟ್‌ನಲ್ಲಿ ಸರ್ಕಾರ ಅನುದಾನ ಒದಗಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಆಗ್ರಹಿಸಿದರು.
ನೂತನ ರಾಜ್ಯ ಸರ್ಕಾರ ಆಯವ್ಯಯದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅವಶ್ಯಕ ಅನುದಾನ ಬಿಡುಗಡೆ ಮಾಡಬೇಕು. ಮಹಾವಿದ್ಯಾಲಯಕ್ಕೆ ಮಹಾ ಶರಣ ಸಮಗಾರ ಹರಳಯ್ಯನವರ ಹೆಸರಿಡಬೇಕು ಎಂದು ಬುಧವಾರ ಆಗ್ರಹಿಸಿದರು.

ಕರವೇ ನಿರಂತರ ಹೋರಾಟಗಳ ಪ್ರಭಾವದಿಂದ ಬಾಗಲಕೋಟೆ ಮತಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಬಹುತೇಕ ಪಕ್ಷಗಳು ಹಾಗೂ ಅಭ್ಯರ್ಥಿಗಳು ತಮ್ಮ ಭರವಸೆಗಳ ಪಟ್ಟಿಯಲ್ಲಿ ಮೊದಲ ಭರವಸೆಯನ್ನಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದಾಗಿ ಲಿಖಿತ ರೂಪದಲ್ಲಿ ತಿಳಿಸಿದ್ದರು. ಮುಖ್ಯವಾಗಿ ಬಾಗಲಕೋಟೆ ಕಾಂಗ್ರೆಸ್ ಕೂಡ ಮೊದಲ ಭರವಸೆಯನ್ನಾಗಿ ಪ್ರಕಟಿಸಿತ್ತು. ಬಾಗಲಕೋಟೆಯ ಚುನಾವಣಾ ಪ್ರಚಾರಕ್ಕೆ ಆಗಮಿಸಿದಾಗ ಖುದ್ದು ಸಿದ್ದರಾಮಯ್ಯನವರೇ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುದಾನ ಒದಗಿಸುತ್ತೇನೆ. ಅಡಿಗಲ್ಲು ಮತ್ತು ಉದ್ಘಾಟನೆ ಎರಡೂ ಸಮಾರಂಭಗಳಿಗೆ ನಾನೇ ಬರುತ್ತೇನೆ ಎಂದು ಬಹಿರಂಗ ಸಮಾವೇಶದಲ್ಲಿ ಭರವಸೆ ನೀಡಿದ್ದು, ಅದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದು, ಬಾಗಲಕೋಟೆ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಾಸಕರಾಗಿ ಆಯ್ಕೆಯಾಗಿರುವ ಎಚ್.ವೈ.ಮೇಟಿ ಅವರು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಆಗುತ್ತದೆ ಎಂಬ ಆಶಾಭಾವನೆ ಬಾಗಲಕೋಟೆ ಜನತೆಗೆ ಹಾಗೂ ಕರವೇ ಮೂಡಿದೆ ಎಂದರು.

೨೦೧೪-೧೫ ರಲ್ಲಿ ಮೆಡಿಕಲ್ ಕಾಲೇಜು ಘೋಷಣೆಯಾಗಿತ್ತು. ೫ ವರ್ಷ ಅವಽಯಲ್ಲಿ ಬಿಡಿಗಾಸು ಅನುದಾನ ನೀಡಲಿಲ್ಲ. ಮುಂದೆ ಸಮ್ಮಿಶ್ರ ಸರ್ಕಾರ ಅವಽಯಲ್ಲಿ ಅನುದಾನ ಬರಲಿಲ್ಲ. ನಾಲ್ಕು ವರ್ಷಗಳ ಕಾಲ ಅಽಕಾರದಲ್ಲಿದ್ದ ಬಿಜೆಪಿ ಸರ್ಕಾರ ಕೂಡಾ ಅನುದಾನ ಒದಗಿಸಲಿಲ್ಲ. ಹೀಗಾಗಿ ಜಿಲ್ಲಾದ್ಯಂತ ಕರವೇ ಸಾರ್ವಜನಿಕ ಸಹಿ ಸಂಗ್ರಹ ಅಭಿಯಾನ, ಪತ್ರ ಚಳುವಳಿ, ಬೂಟ್ ಪಾಲಿಶ್ ಸೇರಿದಂತೆ ಬೃಹತ್ ಜನಾಂದೋಲನದಂತಹ ಮಾಡಲಾಗಿತ್ತು. ಆದರು ಸ್ಪಂದನೆ ಸಿಗಲಿಲ್ಲ. ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಗಮನ ಹರಸಿಬೇಕು ಎಂದು ಆಗ್ರಹಿಸಿದರು.
ನಾಡು, ನುಡಿ, ನೆಲ, ಜಲ ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ಹೋರಾಟ ಮಾಡಿದ ಸಂದರ್ಭದಲ್ಲಿ ಕರವೇ ಹೋರಾಟವನ್ನು ಹತ್ತಿಕ್ಕಲು ಈ ಹಿಂದಿನ ಸರ್ಕಾರ ಕರವೇ ಪದಾಧೊಕಾರಿಗಳ ಹಾಗೂ ಕಾರ್ಯಕರ್ತರ ಮೇಲೆ ಅನೇಕ ಪ್ರಕರಣಗಳನ್ನು ದಾಖಲಿಸಿದ್ದು, ಅವುಗಳನ್ನು ಈ ಸರ್ಕಾರ ಹಿಂಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾಗ್ಯ ಬೆಟಗೇರಿ, ನಗರ ಅಧ್ಯಕ್ಷ ಬಸವರಾಜ ಅಂಬಿಗೇರ, ಸಂಘಟನಾ ಕಾರ್ಯದರ್ಶಿ ಮಲ್ಲು ಕಟ್ಟಿಮನಿ, ರಾಹುಲ್ ಶೆಟ್ಟರ, ಗಣೇಶ ನಾಯಕ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net