

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದ 3ನೇ ಟೆನ್ಸೆಟ್ ಪಶ್ಚಿಮ ಬಂಗಾಳದ ಟಿಟಾಗಢ ರೈಲ್ ಸಿಸ್ಟಂ ಲಿ.(ಟಿಆರ್ಎಸ್ಎಲ್) ಕಾರ್ಯಾಗಾರದಿಂದ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ಸೇರಿದೆ. ಜೂನ್ನಲ್ಲಿ ಹಳದಿ ಮಾರ್ಗದ ರೈಲು ಭಾಗಶ ಸಂಚಾರ ಪ್ರಾರಂಭಿಸುವ ಭರವಸೆ ಬಿಎಂಆರ್ಸಿಎಲ್ ನೀಡಿದೆ. ಬೊಮ್ಮಸಂದ್ರ, ಆರ್.ವಿ.ರಸ್ತೆ ನಡುವಿನ ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಪ್ರಾರಂಭಿಸಲು ಕನಿಷ್ಠ ಮೂರು ರೈಲುಗಳ ಅವಶ್ಯಕತೆ ಇದ್ದು, 30 ನಿಮಿಷದ ಅಂತರದಲ್ಲಿ ಮೆಟ್ರೋ ರೈಲುಗಳು ಈ ಮಾರ್ಗದಲ್ಲಿ ಪ್ರಥಮವಾಗಿ ಓಡಾಡಲಿದೆ.