

ಬಾಗಲಕೋಟೆ: ಇಲ್ಲಿನ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೃತದೇಹಗಳ ಮೇಲಿನ ನರಶಾಸ್ತ್ರ ಚಿಕಿತ್ಸೆಯ ಕಾರ್ಯಾಗಾರ ಈಚೆಗೆ ಜರುಗಿತು.
ಮಹಾವಿದ್ಯಾಲಯದ ಶರೀರ ರಚನಾಶಾಸ್ತ್ರ ವಿಭಾಗ, ಇ.ಎನ್.ಟಿ ವಿಭಾಗ ಮತ್ತು ನಿಸಲ್ (ನ್ಯೂರಲ್ ಇಂಟಿಗ್ರಿಟಿ ಸರ್ಜಿಕಲ್ ಸ್ಕಿಲ್ ಲ್ಯಾಬ್) ಸಹಯೋಗದಲ್ಲಿ ನಡೆದ ಕಾರ್ಯಾಗಾರದಲ್ಲಿ ಮಹಾವಿದ್ಯಾಲಯಕ್ಕೆ ದಾನವಾಗಿ ಪಡೆದ ಮೃತದೇಹಗಳ ಮೇಲೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ನರಶಾಸ್ತçಚಿಕಿತ್ಸಾ ತಜ್ಞರಿಗೆ ತರಬೇತಿ ನೀಡಲಾಯಿತು.
ಶಸ್ತçಚಿಕಿತ್ಸೆ ಅತ್ಯಂತ ಕ್ಲಿಷ್ಟಕರವಾದ ಪ್ರಕ್ರಿಯೆ. ನರಗಳ ಶಾಸ್ತ್ರ ಚಿಕಿತ್ಸೆಯಲ್ಲಿ ಹೆಚ್ಚಿನ ಪರಿಣಿತಿಯ ಅಗತ್ಯವಿದೆ. ಶಸ್ತçಚಿಕಿತ್ಸೆಯನ್ನು ಸುಲಭಸಾಧ್ಯವಾಗಿಸಲು ಮೃತಶರೀರ ಆಧಾರಿತ ಶಸ್ತçಚಿಕಿತ್ಸೆ ಮೂಲಕ ವೈದ್ಯರಿಗೆ,ಶಸ್ತçಚಿಕಿತ್ಸಾ ತಜ್ಞರಿಗೆ ತರಬೇತಿಯನ್ನು ನೀಡಲಾಯಿತು. ತರಬೇತಿಯಿಂದ ಶಾಸ್ತ್ರ ಚಿಕಿತ್ಸಾ ತಜ್ಞರಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದು ಶಿಬಿರಾರ್ಥಿ ವೈದ್ಯರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಡಾ.ಮಾನಸ್‌ಕುಮಾರ ಪಾಣಿಗ್ರಹಿ, ಡಾ.ನರೇಶ ಬಿಯಾನಿ, ಡಾ.ಸಂಜೀವ ಕೊಳಗಿ, ಡಾ.ಅಜಯ ಹೆರೂರ, ಡಾ.ನಿಶಿತ್ ಶಹ, ಡಾ.ಮಾಲಿಪಾಟೀಲ, ಡಾ.ಸಿ.ಎಸ್.ಹಿರೇಮಠ ಮತ್ತು ಡಾ.ಸುಶಿನ್ ದತ್ತ ಸಂಪನ್ಮೂಲ ವೈದ್ಯರಾಗಿ ತರಬೇತಿ ನೀಡಿದರು. ಎಚ್.ಆರ್.ಎಸ್ ನೆವಿಗೇಷನ್, ಇಂಟಾಸ್, ಮ್ಯಾಕ್‌ಟ್ರಾನಿಕ್ಸ್, ಮೆಡ್‌ಟ್ರಾನಿಕ್ಸ್, ಶಲ್ಯ, ಬ್ರೌನ್ ಇತ್ಯಾದಿ ವೈದ್ಯಕೀಯ ಉಪಕರಣಗಳ ಸಂಸ್ಥೆಗಳು ಕಾರ್ಯಾಗಾರದಲ್ಲಿ ಶಾಸ್ತ್ರ ಚಿಕಿತ್ಸೆಗೆ ಅಗತ್ಯವಾದ ಉಪಕರಣಗಳನ್ನು ಒದಗಿಸಿದವು.
ಈ ಸಂದರ್ಭದಲ್ಲಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಅನಾಟಮಿ ವಿಭಾಗದಲ್ಲಿ ೨೫ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಮೃತಶರೀರ ಆಧಾರಿತ ಶಸ್ತçಚಿಕಿತ್ಸಾ ಕೌಶಲ ಪ್ರಯೋಗಾಲ ಸ್ಥಾಪಿಸಲಾಗಿದೆ. ಅತ್ಯಂತ ಸುಸಜ್ಜಿತ ಪ್ರಯೋಗಾಲಯ ಇದಾಗಿದ್ದು, ವಿವಿಧ ಪ್ರಕಾರದ ಶಸ್ತçಚಿಕಿತ್ಸೆ ತರಬೇತಿ ನೀಡಲು ಅಗತ್ಯವಾದ ಎಲ್ಲ ಪ್ರಕಾರದ ಸೌಲಭ್ಯ ಒಳಗೊಂಡಿದೆ. ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸ್ಥಾಪನೆಯಾದ ಮೃತಶರೀರ ಶಸ್ತçಚಿಕಿತ್ಸಾ ಪ್ರಯೋಗಾಲಯ ಉತ್ತರ ಕರ್ನಾಟಕದಲ್ಲಿ ಮೊದಲನೆಯದ್ದು ಎನ್ನುವುದು ಹೆಮ್ಮೆಯ ಸಂಗತಿ ಎಂದರು.
ಮಹಾವಿದ್ಯಾಲಯದ ಶರೀರ ರಚನಾಶಾಸ್ತ್ರ ವಿಭಾಗದ ವೈದ್ಯರು ಆವಿಷ್ಕರಿಸಿರುವ ವಿಶೇಷ ದ್ರಾವಣದಿಂದ ಮೃತ ದೇಹಗಳನ್ನು ಮತ್ತು ಅವುಗಳ ಅಂಗಾ0ಗಗಳನ್ನು ಜೀವಂತ ವ್ಯಕ್ತಿಯಲ್ಲಿರುವಂತೆಯೇ ಕಾಯ್ದಿಡುವ ವಿಶೇಷ ವ್ಯವಸ್ಥೆ ಇದೆ. ಜೊತೆಗೆ ಮೃತ ದೇಹದ ಮೆದುಳಿನಲ್ಲಿ ಕೃತಕ ದ್ರವವನ್ನು (ಸಿ.ಎಸ್.ಎಫ್) ಸಂಚರಿಸುವAತೆ ಮಾಡಿ ಮೃತದೇಹದ ಮೆದುಳನ್ನು ಸಂರಕ್ಷಿಸಿಡಲಾಗುತ್ತಿದೆ. ಮೃತದೇಹದ ಮೆದುಳಿನಲ್ಲಿ ಕೃತಕ ದ್ರವ ಸಂಚಾರ ಮಾಡುವ ಈ ಪ್ರಕಾರದ ಸಂಶೋಧನೆಯು ಭಾರತದಲ್ಲೇ ಪ್ರಥಮ ಹಾಗೂ ಜಗತ್ತಿನಲ್ಲಿ ಎರಡನೆಯದಾಗಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಗೌರವ ಕಾರ್ಯದರ್ಶಿ ಮಹೇಶ ಎನ್.ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ.ಸಜ್ಜನ (ಬೇವೂರ), ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಽÃಕ್ಷಕ ಡಾ.ಶ್ರೀರಾಮ ಕೋರಾ ಇದ್ದರು.