

ಬಾಗಲಕೋಟೆ: ಕುಡಿಯುವ ನೀರು, ಒಳ ಚರಂಡಿ, ನೀರು ಸೇರಿದಂತೆ ಮೂಲ ಸೌಕರ್ಯ ಸಮರ್ಪಕವಾಗಿ ಒದಗಿಸಬೇಕು ಎಂದು ನವನಗರದ ಕೊಳಚೆ ನಿರ್ಮೂಲನಾ ನಿವಾಸಿಗಳು ನಗರಸಭೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮರೆವಣಿಗೆ ಮೂಲಕ ನಗರಸಭೆಗೆ ಆಗಮಿಸಿದ ನಿವಾಸಿಗಳು ನಗರಸಭೆಗೆ ಮುತ್ತಿಗೆ ಹಾಕಿದರು. ಅಲ್ಲದೇ ಅಽಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಮನವಿ ಸಲ್ಲಿಸಿ ಕೂಡಲೇ ಮೂಲ ಸೌಕರ್ಯ ಒದಗಿಸಬೇಕು. ಇಲ್ಲವಾದಲ್ಲಿ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರವು ಸ್ವಚ್ಛ ನಗರ, ಗುಡಿಸಲು ಮುಕ್ತಗೊಳಿಸಲು ಬಡವರಿಗೆ ರಾಜೀವ ಗಾಂಽ, ವಾಂಬೆ ಕಾಲೋನಿಯಲ್ಲಿ ಮನೆಗಳನ್ನು ಹಂಚಿಕೆ ಮಾಡಿದೆ. ಕಾಲೋನಿಗಳು ನಿರ್ಮಾಣಗೊಂಡು ಸಾವಿರಾರು ಸಂಖ್ಯೆಯಲ್ಲಿ ಜನರು ವಾಸ ಮಾಡುತ್ತಿದ್ದರು ಸಹ ಮೂಲ ಸೌಕರ್ಯದಿಂದ ವಂಚಿತವಾಗಿದ್ದೇವೆ. ಕುಡಿಯುವ ನೀರು, ರಸ್ತೆ, ಒಳಚರಂಡಿ ಸರಿಯಾಗಿ ಇಲ್ಲ. ಸ್ವಚ್ಛತೆ ಇಲ್ಲದ ಪರಿಣಾಮ ನಿತ್ಯವು ಮಕ್ಕಳು, ಹಿರಿಯರು, ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ನಗರಸಭೆ ಅಽಕಾರಿಗಳು, ಶಾಸಕರು, ಸದಸ್ಯರು ಗಮನಿಸಿ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ರಾಜಬಂದೇಶ ನೆಡೋನಿ, ರಫೀದ್ ಶೇಖ, ಯಮನಪ್ಪ ಅಂಬಗೇರ, ಈರಪ್ಪ ಮೇಟಿ, ಶಿವಲಿಂಗಪ್ಪ ಪೂಜಾರ, ಸಂಗು ಮಲದಿ ಇತರರು ಇದ್ದರು.