ಮೂಲ ದಾಖಲೆ ಪರಿಶೀಲನೆ ೨೮ರಂದು

Aplication
ಸಾಂದರ್ಭಿಕ ಚಿತ್ರ
Published on

ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಪರಿಶಿಷ್ಟ ಜಾತಿ/ಪಂಗಡಗಳ ಹಿಂಬಾಕಿ ಹುದ್ದೆಗಳ ನೇಮಕಾತಿಗೆ ಸಂಬAಧಿಸಿದAತೆ ಅರ್ಹ ಅಭ್ಯರ್ಥಿಗಳಿಗೆ ೧:೫ರ ಅನುಪಾತದಲ್ಲಿ ನ.೨೮ರಂದು ನಿಗಮದ ಕೇಂದ್ರ ಕಚೇರಿಯಲ್ಲಿ ಮೂಲ ದಾಖಲೆ ಪರಿಶೀಲನೆ ಕಾರ್ಯ ನಡೆಯಲಿದೆ ಎಂದು ನಿಗಮದ ಮುಖ್ಯ ವ್ಯವಸ್ಥಾಪಕರ ಕಚೇರಿ ಪ್ರಕಟಣೆ ತಿಳಿಸಿದೆ. ಅರ್ಹ ಅಭ್ಯರ್ಥಿಗಳು ನಿಗಮದ ವೈಬ್‌ಸೈಟ್‌ನಲ್ಲಿ ತಮ್ಮ ಹೆಸರು ಖಚಿತಪಡಿಸಿಕೊಳ್ಳಬೇಕು. ಕರೆಪತ್ರಗಳನ್ನು ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು. ಕರಾಸಾ ಪೇದೆ ಹುದ್ದೆಯ ದಾಖಲೆ ಪರಿಶೀಲನೆ ನಂತರ ಅರ್ಹ ಅಭ್ಯರ್ಥಿಗಳಿಗೆ ನ.೨೯ರಂದು ದೈಹಿಕ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶೂಸ್ ಹಾಗೂ ಅನುಕೂಲಕರ ಉಡುಪಿನೊಂದಿಗೆ ಹಾಜರಿರಬೇಕು. ದಾಖಲಾತಿಗಳ ಪರಿಶೀಲನೆಯನ್ನು ಒಂದೇ ದಿನ ಮಾಡುತ್ತಿರುವುದರಿಂದ ಗೈರು ಹಾಜರಾಗುವ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ಕಲ್ಪಿಸುವುದಿಲ್ಲ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net