ಮೂರು ಮಕ್ಕಳೊಂದಿಗೆ ತಾಯಿ ನಾಪತ್ತೆ

Published on


ಕಲಬುರಗಿ ನಗರದ ಭರತ ನಗರ ತಾಂಡಾದಲ್ಲಿ ವಾಸವಾಗಿದ್ದ ತಾಯಿ ತನ್ನ ಮೂರು ಮಕ್ಕಳೊಂದಿಗೆ ಕಾಣೆಯಾದ ಘಟನೆ ಬೆಳಕಿಗೆ ಬಂದಿದೆ.
ಜ್ಯೋತಿ ಸುನೀಲ್ ಹಾಗೂ ಮಕ್ಕಳಾದ ದಿವ್ಯಾ, ದೀಪಕ್ ಮತ್ತು ಅಮಿತ್ ಎಂಬ ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ. ೨೫ ರಂದು ಬೆಳಗ್ಗೆ ತನ್ನ ಮಕ್ಕಳ ಜತೆಗೂಡಿ ಹಾಲು ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಹೋದವರು ಮರಳಿ ಬಂದಿಲ್ಲ, ಎಲ್ಲ ಕಡೆ ಹುಡುಕಾಡಿದರು ಪತ್ತೆಯಾಗಿಲ್ಲ ಎಂದು ದೇವಿಕಾ ರಾಮು ರಾಠೋಡ ದೂರಿದ್ದಾರೆ. ದೇವಿಕಾ ಅವರ ಸಹೋದರ  ಸುನಿಲ್‌ನ ಪತ್ನಿ ಹಾಗೂ ಮಕ್ಕಳು. ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net