ಮೂಕಮಾಟಿ ಹೊಸ ಅಲೆ ಎಬ್ಬಿಸಿದ ಮಹತ್ವದ ಮಹಾಕಾವ್ಯ

bkt-28-4
ಬಾಗಲಕೋಟೆ ನಗರದ ಚರಂತಿಮಠದಲ್ಲಿ ಭಾನುವಾರ ಶಿವಾನುಭವ ಸಮಿತಿ ಹಾಗೂ ಸಾಹಿತ್ಯ ಸಂಸ್ಕೃತಿ ಸಂವಹನ ವೇದಿಕೆ ಹಮ್ಮಿಕೊಂಡಿದ್ದ ತಿಂಗಳ ವಿಶೇಷ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಚರಂತಿಮಠದ ಪ್ರಭು ಸ್ವಾಮೀಜಿ ಅವರನ್ನು ಸನ್ಮಾನಿಸಿದರು. ಪ್ರೊ.ಬಿ.ಪಿ.ನ್ಯಾಮಗೌಡ, .ಎಸ್.ಪಾವಟಿ, ಎಸ್.ಆರ್.ಮನಹಳ್ಳಿ, ಡಾ.ಜಗನ್ನಾಥ ವ್ಹಿ.ಚವ್ಹಾಣ, ಡಾ.ಎಸ್.ಡಿ.ಕೆಂಗಲಗುತ್ತಿ ಉಪಸ್ಥಿತರಿದ್ದರು.
Published on

ಬಾಗಲಕೋಟೆ: ಮಹಾಕಾವ್ಯ ಮೂಕಮಾಟಿ ಇಪ್ಪತ್ತನೆಯ ಶತಮಾನದ ಕಡೆಯ ದಶಕಗಳಲ್ಲಿ ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿದ ಮಹತ್ವದ ಕಾವ್ಯ. ಇದರ ಕೇಂದ್ರಬಿAದು ಮತ್ತು ಕೇಂದ್ರಪ್ರಜ್ಞೆ ಮಣ್ಣು. ಉತ್ಕೃಷ್ಟ ಭೂಮಿಗೀತವೂ ಆಗಿರುವ ಈ ಮೂಕಮಾಟಿ ಮಣ್ಣಿನ ಆತಿಹಾಸ, ಮಣ್ಣಿನ ಮೌನ ಸ್ಪಂದನ ಎಂದು ಪ್ರೊ.ಬಿ.ಪಿ.ನ್ಯಾಮಗೌಡ ಹೇಳಿದರು.

ನಗರದ ಚರಂತಿಮಠದಲ್ಲಿ ಭಾನುವಾರ ಶಿವಾನುಭವ ಸಮಿತಿ ಹಾಗೂ ಸಾಹಿತ್ಯ ಸಂಸ್ಕೃತಿ ಸಂವಹನ ವೇದಿಕೆ ಹಮ್ಮಿಕೊಂಡಿದ್ದ ತಿಂಗಳ ವಿಶೇಷ ಉಪನ್ಯಾಸ ಮಾಲಿಕೆ ಐದರಲ್ಲಿ ವಿಶೇಷ ಆಚಾರ್ಯ ವಿದ್ಯಾ ಸಾಗರಜೀ ವಿರಚಿತ ಮೂಕಮಾಟಿ ಕಾವ್ಯವಲೋಕನ ಎಂಬ ವಿಷಯ ಕುರಿತು ಮಾತನಾಡಿದರು.

ಮೂಕಮಾಟಿ ಮಹಾಕಾವ್ಯದ ಕವಿ ಒಬ್ಬ ಯೋಗಿಯಾದರೂ ಅವರು ರಸತಪಸ್ವಿ, ಭಾವಲೋಕವಿಹಾರಿ. ಇದೊಂದು ವರ್ಣನಾ ಪ್ರಧಾನ ಕಾವ್ಯ. ಪ್ರಕೃತಿಯೇ ಮುಖ್ಯ ಪಾತ್ರಗಾರ. ಅನುಭವವನ್ನು ಅನುಭಾವವಾಗಿಸಿರುವುದು ಮೂಕಮಾಟಿ ಮಹಾಕಾವ್ಯದ ದೊಡ್ಡ ಸಾಧನೆ. ಕವಿ ಆ. ವಿದ್ಯಾಸಾಗರರಿಗೆ ಭಾಷೆಯೊಡನೆ ಸರಸವಾಡುವುದೆಂದರೆ ಹರ್ಷ. ಭಾಷೆಯ ಲಯ, ಲಾಸ್ಯ ವಿಲಾಸವನ್ನು ಸೂರೆ ಮಾಡುತ್ತ, ಸೊಗಸಾದ ಕಲ್ಪನೆಗಳ ಸೋನೆಮಳೆಗರೆಯುತ್ತ ಹೃದ್ಯವಾದ ಕಾಮನಬಿಲ್ಲನ್ನು ಸೃಷ್ಟಿಸುತ್ತ ಮೂಕಮಾಟಿ ಒಂದು ಮಹೋನ್ನತ ಕಾವ್ಯದ ಹಿತಾನುಭವ ಕೊಡುತ್ತದೆ ಎಂದರು.

ಚರ0ತಿಮಠದ ಡಾ.ಪ್ರಭು ಸ್ವಾಮೀಜಿ ಮಾತನಾಡಿ, ಮೂಕಮಾಟೆಯಲ್ಲಿ ಮಣ್ಣಿನ ಮೂಲಕ ಮುಕ್ತಿ ಕಾಣುವ ಬಗೆಯನ್ನು ವಿದ್ಯಾ ಸಾಗರಜೀ ನಿರೂಪಿಸಿದ್ದಾರೆ. ಇಳೆ, ಮಣ್ಣು, ಕುಂಭ, ಕುಂಭಕಾರ, ನೀರು, ಹಗ್ಗ, ಮೀನು, ಗಿಡ-ಮರ, ಪಕ್ಷಿ, ಕಲ್ಲು, ಪಂಚಭೂತಗಳು ಎಲ್ಲವೂ ಇಲ್ಲಿ ವಸ್ತುವಾಗಿವೆ. ಇವುಗಳ ಅರ್ಥ ವಲಯ ನೆಲದಗಲ, ಜಗದಗಲ, ಮುಗಿಲಗಲ ವ್ಯಾಪ್ತಗೊಳ್ಳುವ ಪರಿ ಪರಿಭಾವನೀಯ. ಇಂದ್ರಿಯ ಗೋಚರ ಹಾಗೂ ಇಂದ್ರಿಯಗ್ರಾಹ್ಯ ವಸ್ತುಗಳನ್ನು ಶಾಬ್ದಿಕವಾಗಿ ಪರಿಚಯಿಸುವುದರೊಂದಿಗೆ ಅದೇ ಉಸಿರಿಗೆ ಅತೀಂದ್ರಿಯ ಎತ್ತರಗಳದಾಟಿಸುವ ಲಘಿಮಾ ಕೌಶಲ ಕವಿ ವಿದ್ಯಾಸಾಗರರಿಗೆ ಸಿದ್ದಿಸಿದೆ ಎಂದು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ ಪಡೆದ ಪ್ರಭು ಸ್ವಾಮೀಜಿ ಅವರಿಗೆ ಸನ್ಮಾನಿಸಲಾಯಿತು. ಎ.ಎಸ್.ಪಾವಟಿ, ಎಸ್.ಆರ್.ಮನಹಳ್ಳಿ, ಡಾ.ಜಗನ್ನಾಥ ವ್ಹಿ.ಚವ್ಹಾಣ, ಡಾ.ಎಸ್.ಡಿ.ಕೆಂಗಲಗುತ್ತಿ ಉಪಸ್ಥಿತರಿದ್ದರು. ಡಾ.ಎಂ.ನAಜುAಡಸ್ವಾಮಿ ಸ್ವಾಗತಿಸಿದರು.ಡಾ.ಬಸವರಾಜ ವೀ. ಖೋತ ಅತಿಥಿಗಳನ್ನು ಪರಿಚಯಿಸಿದರು. ನಂದಿನಿ ದೊಡಮನಿ ವಂದಿಸಿದರು. ಡಾ.ಐ.ಕೆ.ಮಠದ ನಿರೂಪಿಸಿದರು. ಡಾ.ಸಿದ್ದರಾಮಯ್ಯ ಮಠಪತಿ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net