ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ

31_Mar_GPT_Ramzan
Published on

ಗುಂಡ್ಲುಪೇಟೆ: ಪಟ್ಟಣ ಸೇರಿದಂತೆ ವಿವಿಧ ಕಡೆಗಳಲ್ಲಿ ಸೋಮವಾರ ಮುಸ್ಲಿಮರು ರಂಜಾನ್ ಹಬ್ಬವನ್ನು ವಿವಿಧ ಕಡೆಗಳಲ್ಲಿ ಮುಸ್ಲಿಮರಿಂದ

ರಂಜಾನ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಪಟ್ಟಣದ ಈದ್ಗಾ ಮೈದಾನ, ಬೇಗೂರು, ತೆರಕಣಾಂಬಿ, ಕಗ್ಗಳದಹುಂಡಿ, ಬಾಚಹಳ್ಳಿ ಮುಂತಾದ ಕಡೆಗಳಲ್ಲಿ ನೆಲೆಸಿರುವ ಸಮುದಾಯದವರು ಶ್ವೇತವಸ್ತ್ರ ಧರಿಸಿದ ಪುರುಷರು ಹಾಗೂ ಬಾಲಕರು ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.

ಜಾಮಿಯಾ ಮಸೀದಿ ಧರ್ಮ ಗುರು ಜಾಬೀರ್ ಹಜ್ರತ್ ಅವರು ಪವಿತ್ರ ರಂಜಾನ್ ತಿಂಗಳ ಕುರಿತು ಹಲವು ಸಂದೇಶಗಳನ್ನು ತಿಳಿಸಿದರು. ನಂತರ ಪವಿತ್ರ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಲಬಾಬಿನ್ ಮಸೀದಿ ಗುರುಗಳಾದ ಅಬ್ದುಲ್ ಕರೀಮ್, ಜಾಮಿಯಾ ಮಸೀದಿ ಅಧ್ಯಕ್ಷ ಸರ್ದಾರ್, ಕರ್ನಾಟಕ ಕಾವಲು ಪಡೆಯ ತಾಲೂಕು ಅಧ್ಯಕ್ಷ ಎ.ಅಬ್ದುಲ್ ಮಾಲಿಕ್, ಮುಸ್ಲಿಂ ಮುಖಂಡರು ಹಾಗೂ ಸಾವಿರಾರು ಮುಸ್ಲಿಮರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net