

ಕಲಬುರಗಿ : ಜಿಲ್ಲೆಯ ಸೇಡಂ, ಚಿತ್ತಾಪುರ ಹಾಗೂ ಚಿಂಚೋಳಿ ತಾಲೂಕಿನಲ್ಲಿ ಮಳೆ ಆರ್ಭಟ ಜೋರಾಗಿದೆ. ಶುಕ್ರವಾರ ಎಲ್ಲಡೆ ಮಳೆ ಸುರಿಯುತ್ತಿದೆ.
ಮಳೆಯಿಂದಾಗಿ ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮದ ಬಳಿ ಕಾಗಿಣಾ ನದಿ ಸೇತುವೆ ಮೇಲೆ ನೀರಿನ ಪ್ರವಾಹ ಉಂಟಾಗಿ ಸೇತುವೆ ಮುಳುಗಿದೆ. ಇದರಿಂದಾಗಿ ಚಿತ್ತಾಪುರ-ಕಲಬುರಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಚಿತ್ತಾಪುರದಿಂದ ಶಹಾಬಾದ ಮೂಲಕ ಕಲಬುರಗಿಗೆ ವಾಹನಗಳು ಸಂಚರಿಸುತ್ತಿವೆ.
ಇನ್ನೊಂದು ಕಡೆಗೆ ಸೇಡಂ ತಾಲೂಕಿನ ಸಂಗಾವಿ (ಎಂ) ಗ್ರಾಮದ ಸೇತುವೆ ಸಹ ಮುಳುಗಡೆಯಾಗಿದೆ. ಹೀಗಾಗಿ ಸುತ್ತಲಿನ ಸಂಪರ್ಕ ಕಡಿತಗೊಂಡಿದೆ.