ಮುಳಗಡೆ ಊರಲ್ಲಿ ಕಾರಹುಣ್ಣಿಮೆ ಸಂಭ್ರಮ

bkt-11-9 (1)
ಬಾಗಲಕೋಟೆ ನಗರದಲ್ಲಿ ಕಾರಹುಣ್ಣಿಮೆ ಪ್ರಯುಕ್ತ ನಡೆದ ಕರಿ ಹರಿಯುವ ಸಂಭ್ರಮ.
Published on

ಬಾಗಲಕೋಟೆ: ಪ್ರಸಕ್ತ ವರ್ಷ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿದ್ದು ರೈತರಲ್ಲಿ ಸಂಭ್ರಮ ಮನೆ ಮಾಡಿದ್ದು, ನಗರದಲ್ಲಿ ಕಾರಹುಣ್ಣಿಮೆ ಪ್ರಯುಕ್ತ ಬುಧವಾರ ನಡೆದ ಕರಿ ಹರಿಯುವ ಸಂಪ್ರದಾಯ ಸಂತಸ, ಸಂಭ್ರಮದಿ0ದ ಜರುಗಿತು.

ನಗರದ ವಲ್ಲಾಭಾಯಿ ಚೌಕನಲ್ಲಿ ಎತ್ತುಗಳನ್ನು ಕರಿ ಹರಿಯಲಾಯಿತು. ಹಳಪೇಟೆ ಕುಂಬಾರ ಮಡು ಓಣಿಯ ದುಂಡಪ್ಪ ಯಳ್ಳಿಗುತ್ತಿಯ ಅವರ ಬಿಳಿ ಬಣ್ಣದ ಎತ್ತು ಕರಿ ಹರಿಯಿತು. ಈ ಸಾರಿ ಬಿಳಿ ಬಣ್ಣದ ಎತ್ತು ಕರಿ ಹರಿದಿದ್ದರಿಂದ ಬಿಳಿ ಜೋಳ ಉತ್ತಮವಾಗಿ ಬರುತ್ತದೆ ಎಂದು ವಾಡಿಕೆಯಂತೆ ತಿಳಿಸಲಾಯಿತು. ಎತ್ತು ಕರಿ ಹರಿಯುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕೃಷಿಕರು ಸಂಭ್ರಮಿಸಿದರು. ಕುಣಿದು ಕುಪ್ಪಳಿಸತ್ತಾ, ಭಾಜಾ ಭಜಂತ್ರಿಯೊAದಿಗೆ ಎತ್ತಿನ ಮೆರವಣಿಗೆ ಮಾಡಲಾಯಿತು.

ಕಾರಹುಣ್ಣಿಮೆ ಅಂಗವಾಗಿ ಎತ್ತುಗಳನ್ನು ವಿವಿಧ ಬಣ್ಣಬಣ್ಣಗಳಿಂದ ಅಲಂಕರಿಸಲಾಗಿತ್ತು. ರಿಬ್ಬನ್ ಕಟ್ಟಿ ಶೃಂಗರಿಸಲಾಗಿತ್ತು. ಬಾಗಲಕೋಟೆ ನಗರ ಸೇರಿದಂತೆ ಸುತ್ತಮುತ್ತಲೀನ ಗ್ರಾಮಗಳ ಜನರು ಕರಿ ಹರಿಯುವನ್ನು ನೋಡಲು ಆಗಮಿಸಿದ್ದರು.

ಇನ್ನು ಕಾರಣ ಹುಣ್ಣಿಮೆ ಅಂಗವಾಗಿ ರಾಸುಗಳಿಗೆ ಮಗಡಾ, ಹಗ್ಗ, ಮೂಗದಾನ, ಹಣಿಕಟ್ಟ, ಬಾರ್ ಸೇರಿದಂತೆ ವಿವಿಧ ವಸ್ತುಗಳ ಖರೀದಿಗೆ ರೈತರು ಮುಗಿ ಬಿದ್ದಿದ್ದರು. ಕಾರ ಹುಣ್ಣಿಮೆ ಸಂಭ್ರಮ, ಸಡಗರದಿಂದ ಆಚರಿಸಿದ್ದು ರೈತರ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net