

ಭಟ್ಕಳ: ತಾಲೂಕಿನ ಮುರ್ಡೇಶ್ವರದ ಶಿವಕೃಪಾ ಲಾಡ್ಜ್ ನ ಮೇಲೆ ಪೊಲೀಸರು ದಾಳಿ ನಡೆಸಿ ನೊಂದ ಇಬ್ಬರು ಮಹಿಳೆಯರನ್ನು ರಕ್ಷಿಸಿ, ಮೂವರಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಮುರ್ಡೇಶ್ವರದ ಶಿವಕೃಪಾ ಲಾಡ್ಜ್ ಮೇಲೆ ಸಿಪಿಐ ಮಹಾಬಲೇಶ್ವರ ನಾಯ್ಕ ನೇತೃತ್ವದ ತಂಡ ಸೋಮವಾರ ದಾಳಿ ನಡೆಸಿದೆ. ಹೊನ್ನಾವರ ತಾಲೂಕಿನ ನಾಗರಾಜ ಮಂಜುನಾಥ ಮೊಗೇರ, ಮುರ್ಡೇಶ್ವರ ನಿವಾಸಿ ಮಯೂರ ಸುರೇಶ ಮುರ್ಡೇಶ್ವರ ಬಂಧಿತರು. ಇನ್ನೊಬ್ಬ ಆರೋಪಿ ಶಿವಪ್ರಸಾದ ರಾಮರಾವ್ ತಲೆಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಶೋಧಿಸುತ್ತಿದ್ದಾರೆ. ಬೆಂಗಳೂರಿನ ಹೂವಿನ ವ್ಯಾಪಾರಿ 28 ವರ್ಷದ ಮಹಿಳೆ, ಹಾಸನದ 34 ವರ್ಷದ ಮಹಿಳಾ ಟೇಲರ್ ರಕ್ಷಣೆಗೊಳಗಾದವರು. ಮಹಿಳೆಯರ ಪರಿಸ್ಥಿತಿಯನ್ನು ದುರುಪಯೋಗಿಸಿಕೊಂಡು ಅವರನ್ನು ಮುರ್ಡೇಶ್ವರಕ್ಕೆ ಕರೆಯಿಸಿಕೊಂಡು ಲೈಂಗಿಕ ಶೋಷಣೆ ನಡೆಸಿದ್ದಾರೆ ಎನ್ನಲಾಗಿದೆ. ಈ ಕುರಿತು ಸಿಪಿಐ ಮಹಾಬಲೇಶ್ವರ ನಾಯ್ಕ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.