ಮುರ್ಡೆಶ್ವರನ ಚರಣದಲ್ಲಿ ಶರಣಾದ ಭಕ್ತರು

21bkl2 (1)
Published on

ಭಟ್ಕಳ: ಮುರ್ಡೆಶ್ವರನ ಸನ್ನಿಧಿಗೆ ಭಕ್ತರ ಮಹಾಪೂರವೇ ಹರಿದುಬಂದಿದ್ದು, ಸರತಿಯ ಸಾಲಿನಲ್ಲಿ ನಿಂತು ಜಗದೊಡೆಯನ ದರ್ಶನ ಪಡೆದರು

ಭಕ್ತರ ಹಷೋದ್ಘಾರಗಳ ನಡುವೆ ಅತಿ ವಿಜೃಂಭಣೆಯಿಂದ ಊರ ಪರಊರ ಭಕ್ತರ ಸಮ್ಮಖದಲ್ಲಿ ನಡೆಯಿತು. ಓಲಗ ಮಂಟಪದಲ್ಲಿ ನಡೆದ ಪುಷ್ಪರಥೋತ್ಸವ, ದೇವಸ್ಥಾನದ ಪೌಳಿಯಲ್ಲಿ ಸುಂದರವಾಗಿ ಅಲಂಕೃತಗೊಂಡ ಸ್ವರ್ಣರಥದಲ್ಲಿ ಶಿವನ ಮೆರವಣಿಗೆ ಇವೆಲ್ಲವೂ ಭಕ್ತರ ಕಣ್ಮನ ಸೆಳೆದು ಭಾವಪರವಶರಾಗುವಂತೆ ಮಾಡಿತು.

ತಾಲೂಕಿನ ಪ್ರಮುಖ ದೇವಸ್ಥಾನಗಳಲೆಲ್ಲ ಓಂ ನಮಃ ಶಿವಾಯ ಜಪಮಾಲೆ ಕೇಳಿ ಬರುತ್ತಿತ್ತು. ನಂತರ ಮಹಾಮಂಗಳಾರತಿ, ಮಹಾಪೂಜೆ ನಡೆದು ಪ್ರಸಾದ ವಿತರಿಸಲಾಯಿತು. ದೇವಸ್ಥಾನಕ್ಕೆ ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕರಾದ ಮಂಕಾಳ ವೈದ್ಯ, ಜೆ.ಡಿ.ನಾಯ್ಕ ಮತ್ತು ಕುಟುಂಬಸ್ಥರು, ಭಟ್ಕಳದ ತಹಶೀಲ್ದಾರ್ ವಿ.ಪಿ. ಕೊಟ್ರಳ್ಳಿ ಸೇರಿ ಸಾವಿರಾರು ಸಂಖ್ಯೆಯಲ್ಲಿ ಜನರು ದೇವರ ದರ್ಶನ ಪಡೆದರು. ಮೊಕ್ತೇಸರ ಶ್ರೀಪಾದ ಕಾಮತ, ಸಿಬ್ಬಂದಿ ಭಕ್ತಾದಿಗಳಿಗೆ ಸರಳ ದರ್ಶನಕ್ಕೆ ಸಿದ್ಧತೆ ಮಾಡಿಕೊಟ್ಟರು. ಅರ್ಚಕ ಜಯರಾಮ ಅಡಿಗರ ನೇತೃತ್ವದಲ್ಲಿ ಮಹಾಶಿವರಾತ್ರಿಯ ಎಲ್ಲ ಅನುಷ್ಠಾನಗಳು ಸಾಂಗವಾಗಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net