ಮುರ್ಡೆಶ್ವರದ ಮಾತೋಬಾರ ರಥೋತ್ಸವ

20bkl1 (4) (1)
Published on

ಭಟ್ಕಳ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಮುರ್ಡೆಶ್ವರದ ಮಾತೋಬಾರ ಶ್ರೀ ಮುರ್ಡೆಶ್ವರ ದೇವರ ರಥೋತ್ಸವವು ಸಾವಿರಾರು ಭಕ್ತರ ಹಷೋದ್ಗಾರಗಳ ನಡುವೆ ಸೋಮವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.

ಮಹಾರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೆ ದೇವಸ್ಥಾನದಲ್ಲಿ ವಿವಿಧ ಧಾರ್ವಿುಕ ಕಾರ್ಯಕ್ರಮಗಳು, ಹೋಮ, ಹವನಗಳನ್ನು ವಿಧಿವತ್ತಾಗಿ ನಡೆದವು. ಮಧ್ಯಾಹ್ನದಿಂದ ಸಾವಿರಾರು ಭಕ್ತರು ರಥಕಾಣಿಕೆ ನೀಡಿ ಪೂಜೆ ಪುರಸ್ಕಾರ ನೆರವೇರಿಸಿದರು. ಸಂಜೆ 5.30ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಮಹಾರಥವನ್ನು ದೇವಸ್ಥಾನದ ಕೆರೆಯ ಸುತ್ತ ಭಕ್ತರ ಜಯಘೊಷದೊಂದಿಗೆ ಎಳೆಯಲಾಯಿತು. ಈ ವೇಳೆ ಆರ್. ಎನ್. ಶೆಟ್ಟಿ ಅವರು ಪೂಜೆ ಸಲ್ಲಿಸಿದರು. ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕ ಮಂಕಾಳ ವೈದ್ಯ, ತಹಸೀಲ್ದಾರ್ ವಿ.ಪಿ. ಕೊಟ್ರಳ್ಳಿ, ದೇವಸ್ಥಾನದ ಟ್ರಸ್ಟಿ ಶ್ರೀಪಾದ ಕಾಮತ, ಆನಂದ ಶೆಟ್ಟಿ ಸೇರಿ ವಿವಿಧ ಗಣ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net